Chandrayaan-3: ಚಂದಮಾನ ಕಥೆ ಕೇಳ್ತಿದ್ವಿ, ಈಗ ಚಂದ್ರಯಾನ 3 ನೋಡ್ತಿದ್ದೇವೆ: ಪುಟ್ಟ ಮಕ್ಕಳ ಮಾತು ಕೇಳಿ

Chandrayaan-3: ಚಂದಮಾನ ಕಥೆ ಕೇಳ್ತಿದ್ವಿ, ಈಗ ಚಂದ್ರಯಾನ 3 ನೋಡ್ತಿದ್ದೇವೆ: ಪುಟ್ಟ ಮಕ್ಕಳ ಮಾತು ಕೇಳಿ

ಭೀಮೇಶ್​​ ಪೂಜಾರ್
| Updated By: ರಮೇಶ್ ಬಿ. ಜವಳಗೇರಾ

Updated on:Aug 23, 2023 | 10:14 AM

ರಾಯಚೂರಿನಲ್ಲಿ ಶಾಲಾ ಮಕ್ಕಳು ಚಂದ್ರಯಾನ 3 ಸಕ್ಸಸ್ ಗಾಗಿ ದೇವರ ಮೊರೆ ಹೋಗಿದ್ದಾರೆ. ರಾಯಚೂರು ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ. ಈ ವೇಳೆ ಮಕ್ಕಳು ಏನು ಹೇಳಿದ್ರು ಎನ್ನುವುದನ್ನು ಕೇಳಿ.

ರಾಯಚುರು, (ಆಗಸ್ಟ್ 23):  Chandrayaan-3: ಚಂದ್ರನ ಗುಳಿ ಕೆನ್ನೆಗೆ ವಿಕ್ರಮ್​ ಲ್ಯಾಂಡರ್ ಮುತ್ತಿಕ್ಕಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಇಡೀ ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ. ಚಂದಿರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್​ ಆಗೋ ಮೂಲಕ ಹೊಸ ಇತಿಹಾಸ ನಿರ್ಮಿಸಲಿದೆ. ಈ ನಡುವೆಯೇ ದೇಶಾದ್ಯಂತ ಮಂದಿರ-ಮಸೀದಿಗಳಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಇನ್ನು ರಾಯಚೂರಿನಲ್ಲಿ ಶಾಲಾ ಮಕ್ಕಳು ಚಂದ್ರಯಾನ 3 ಸಕ್ಸಸ್ ಗಾಗಿ ದೇವರ ಮೊರೆ ಹೋಗಿದ್ದಾರೆ. ರಾಯಚೂರು ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

Published on: Aug 23, 2023 10:08 AM