ಮೈಸೂರು: ಕಲಾವಿದನ ಮನೆ ಮುಂದಿದ್ದ ಗಣೇಶನ ಮೂರ್ತಿ ಲಪಟಾಯಿಸಿದ ಕಳ್ಳರು!
ದೇವಸ್ಥಾನಗಳಿಂದ ವಿಗ್ರಹಗಳನ್ನು ಕಳುವು ಮಾಡುವುದನ್ನು ಕೆಲ ಕಳ್ಳರು ರೂಢಿಮಾಡಿಕೊಂಡಿರುತ್ತಾರೆ. ಆದರೆ ಈಗ ಮನೆಗಳ ಮುಂದಿನ ವಿಗ್ರಹಗಳನ್ನೂ ಕಳ್ಳರು ಬಿಡುತ್ತಿಲ್ಲ. ಎಂಥ ಕಾಲ ತಂದೋ ಶಿವನೇ ಬಂದಿತ್ತೋ ಕಲಿಗಾಲ ಅಂತ ತತ್ವಪದವನ್ನು ಕೊಂಚ ಮಾರ್ಪಡಿಸಿಕೊಂಡು ಹಾಡಿದರೆ ತಪ್ಪಿಲ್ಲವೇನೋ.....
ಮೈಸೂರು: ನಗರದ ಕುಂಬಾರಗೇರಿಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯವನ್ನೊಮ್ಮೆ ನೋಡಿ. ದ್ವಿಚಕ್ರವಾಹನವೊಂದರ ಮೇಲೆ ಸವಾರಾಗಿರುವ ಕಳ್ಳರು ಮನೆ ಮುಂದೆ ಇರಿಸಿದ್ದ ಗಣಪತಿ ವಿಗ್ರವಹವನ್ನು ಅನಾಮತ್ತಾಗಿ ಎತ್ತಿಕೊಂಡು ಪರಾರಿಯಾಗುತ್ತಾರೆ! ಕಳ್ಳರು ಹಿಂದೂಗಳೇ ಆಗಿದ್ದು ಮನೆಯಲ್ಲಿ ಅಥವಾ ತಮ್ಮ ಓಣಿಯಲ್ಲಿ ಕದ್ದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿದರೆ ದೇವರು ಮೆಚ್ಚುವನೇ? ವಿಗ್ರಹಗಳನ್ನು ತಯಾರಿಸುವ ಕಲಾವಿದ ರೇವಣ್ಣ ಅವರ ಮನೆಮುಂದಿನಿಂದ ವಿಗ್ರಹ ಕಳುವಾಗಿದ್ದು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಮೈಸೂರು ಪ್ರವಾಸದ ಸಮಯ ಬದಲಾವಣೆ: ಕಾರಣ ಮುಡಾ ಕೇಸ್..!