AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಮೈಸೂರು ಪ್ರವಾಸದ ಸಮಯ ಬದಲಾವಣೆ: ಕಾರಣ ಮುಡಾ ಕೇಸ್..!

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ನಾಳೆ ಹೈಕೋರ್ಟ್​​ನಲ್ಲಿ ಪ್ರಾಸಿಕ್ಯೂಷನ್ ಕುರಿತ ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಹೈಕೋರ್ಟ್​​ನಲ್ಲಾಗುವ ಬೆಳವಣಿಗೆಗಳ ಮೇಲೆ‌ ನಿಗಾ ಇಡಲಿದ್ದು, ಮನೆಯಲ್ಲೇ ವಾದ, ಪ್ರತಿವಾದದ ಆಲಿಸಲಿದ್ದಾರೆ. ಹೀಗಾಗಿ ನಾಳೆ‌ ಕೈಗೊಂಡಿದ್ದ ಮೈಸೂರು ಪ್ರವಾಸದಲ್ಲಿ ಬದಲಾವಣೆ ಮಾಡಲಾಗಿದೆ.

ಸಿದ್ದರಾಮಯ್ಯ ಮೈಸೂರು ಪ್ರವಾಸದ ಸಮಯ ಬದಲಾವಣೆ: ಕಾರಣ ಮುಡಾ ಕೇಸ್..!
ಸಿದ್ದರಾಮಯ್ಯ ಮೈಸೂರು ಪ್ರವಾಸದ ಸಮಯ ಬದಲಾವಣೆ, ಕಾರಣ ಮುಡಾ ಕೇಸ್..!
ಗಂಗಾಧರ​ ಬ. ಸಾಬೋಜಿ
|

Updated on: Sep 01, 2024 | 4:55 PM

Share

ಬೆಂಗಳೂರು, ಸೆಪ್ಟೆಂಬರ್​ 01: ಹೈಕೋರ್ಟ್​ ಅಂಗಳದಲ್ಲಿ ಮುಡಾ (muda) ಕಾನೂನು ಸಮರ ನಡೆಯುತ್ತಿದೆ. ಈವರೆಗೆ ಎರಡು ಬಾರಿ ಹೈಕೋರ್ಟ್​ನಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್​ ಸಂಬಂಧದ ವಿಚಾರಣೆ ಮುಂದೂಡಿಕೆ ಆಗಿದೆ. ಆದರೆ ನಾಳೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಪ್ರಮುಖ ದಿನವೆಂದು ಹೇಳಬಹುದು. ನಾಳೆ ಹೈಕೋರ್ಟ್​ನಲ್ಲಿ ಪ್ರಾಸಿಕ್ಯೂಷನ್ ಕುರಿತು ಅರ್ಜಿ ವಿಚಾರಣೆ ಹಿನ್ನಲೆ ನಾಳಿನ ಮೈಸೂರು ಪ್ರವಾಸದಲ್ಲಿ ಬದಲಾವಣೆ ಆಗಿದ್ದು, ಬೆಳಗ್ಗೆ ಬದಲಾಗಿ ಸಂಜೆ ಮೈಸೂರಿಗೆ ತೆರಳಲಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ನಾಳೆ ಹೈಕೋರ್ಟ್​​ನಲ್ಲಿ ಪ್ರಾಸಿಕ್ಯೂಷನ್ ಕುರಿತ ಅರ್ಜಿ ವಿಚಾರಣೆ ನಡೆಯಲಿದೆ. ಆಗಸ್ಟ್​​ 19, 31ರಂದು ಹೈಕೋರ್ಟ್​ನಲ್ಲಿ ನಡೆದಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿತ್ತು.

ಇದನ್ನೂ ಓದಿ: ಮೂಡ ಕೇಸಿನಲ್ಲಿ ಸಿಎಂ ಪಾತ್ರ ಏನೆಂದು ಹೇಳುತ್ತಿಲ್ಲ? ಹೈಕೋರ್ಟ್ ಕಲಾಪದ ವಿಡಿಯೋ ವೈರಲ್

ಹೀಗಾಗಿ ಹೈಕೋರ್ಟ್​​ನಲ್ಲಾಗುವ ಬೆಳವಣಿಗೆಗಳ ಮೇಲೆ‌ ಸಿಎಂ ನಿಗಾ ಇಡಲಿದ್ದಾರೆ. ಹಾಗಾಗಿ ಮನೆಯಲ್ಲೇ ವಾದ, ಪ್ರತಿವಾದದ ಮೇಲೆ ನಿಗಾ ಇಡಲಿದ್ದಾರೆ. ನಾಳೆ ಸಂಜೆ 5ರವರೆಗೆ ಯಾವುದೇ ಕಾರ್ಯಕ್ರಮ ಇಟ್ಟುಕೊಂಡಿಲ್ಲ. ಇದೇ ಕಾರಣಕ್ಕೆ ನಾಳೆ‌ ಕೈಗೊಂಡಿದ್ದ ಸಿಎಂ ಮೈಸೂರು ಪ್ರವಾಸದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ ನಾಳಿನ ಮೈಸೂರು ಪ್ರವಾಸದಲ್ಲಿ ಬದಲಾವಣೆ

ನಾಳೆ ಬೆಳಗ್ಗೆ ಬದಲಾಗಿ ಸಂಜೆ ಮೈಸೂರಿಗೆ ತೆರಳುವ ಸಿದ್ದರಾಮಯ್ಯ, ನಾಳೆ ರಾತ್ರಿ ಮೈಸೂರಲ್ಲೇ ವಾಸ್ತವ್ಯ ಹೂಡುಲಿದ್ದಾರೆ. ಮಂಗಳವಾರ ಬೆಳಗ್ಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ವಿಶೇಷ ಪೂಜೆ ಬಳಿಕ ಸಿದ್ದರಾಮಯ್ಯ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಾಡಿದ್ದು ನಡೆಯುವ ಚಾಮುಂಡಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಭೆ ಬಳಿಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಸೇರಿದಂತೆ ಇತರೆ ಯಾರದೇ ಪ್ರಾಸಿಕ್ಯೂಷನ್ ಅರ್ಜಿ ಬಾಕಿ ಇಲ್ಲ: ರಾಜಭವನ ಸ್ಪಷ್ಟನೆ

ನಿನ್ನೆಯಷ್ಟೇ ಹೈಕೋರ್ಟ್​ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ ಸಂಬಂಧ ಅರ್ಜಿ ವಿಚಾರಣೆ ನಡೆದಿತ್ತು. ಸರಿ ಸುಮಾರು ಐದಾರು ತಾಸುಗಳ ಕಾಲ ವಾದ ಪ್ರತಿವಾದ ಜೋರಾಗಿಯೇ ಇತ್ತು. ಸ್ನೇಹಮಯಿ ಕೃಷ್ಣ ಅರ್ಜಿ ಪರ ವಕೀಲರು ವಾದಕ್ಕೆ ಸಮಯ ಕೇಳುತ್ತಿದ್ದಂತೆ ನ್ಯಾಯಧೀಶರು ಅರ್ಜಿ ವಿಚಾರಣೆಯನ್ನ ನಾಳೆಗೆ ಮುಂದೂಡಿದ್ದರು. ಹೀಗಾಗಿ ನಾಳೆ ಹೈಕೋರ್ಟ್​ನಲ್ಲಿ ಮತ್ತೊಮ್ಮೆ ವಿಚಾರಣೆ ನಡೆಯಲಿದೆ. ನಾಳೆ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್​ ಭವಿಷ್ಯ ಹೊರಬೀಳಲಿದೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.