ದರ್ಶನ್ ಬಂದ ನಂತರ ಹೆಚ್ಚುತ್ತಿದೆ ಬಳ್ಳಾರಿ ಜೈಲು ಖದರು, ಹೊರಭಾಗದಲ್ಲೂ ಸಿಸಿಟಿವಿ ಕೆಮೆರಾಗಳು

ದರ್ಶನ್ ಬಂದ ನಂತರ ಹೆಚ್ಚುತ್ತಿದೆ ಬಳ್ಳಾರಿ ಜೈಲು ಖದರು, ಹೊರಭಾಗದಲ್ಲೂ ಸಿಸಿಟಿವಿ ಕೆಮೆರಾಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 03, 2024 | 5:59 PM

ಬೆನ್ನುಮೂಳೆ ನೋವಿನಿಂದ ಬಳಲುತ್ತಿರುವ ದರ್ಶನ್ ಗೆ ಶೌಚಕ್ಕಾಗಿ ಸರ್ಜಿಕಲ್ ಚೇರ್ ಒಂದನ್ನು ಜೈಲಧಿಕಾರಿಗಳು ಒದಗಿಸಿದ್ದಾರೆ ಮತ್ತು ಇವತ್ತಿನ ಬೆಳವಣಿಗೆಯೆಂದರೆ ನಟ ಟೀವಿಗಾಗಿಯೂ ಬೇಡಿಕೆ ಇಟ್ಟಿದ್ದಾರಂತೆ. ಇಷ್ಟರಲ್ಲೇ ಅದನ್ನು ಕಲ್ಪಿಸುವ ವ್ಯವಸ್ಥೆ ಮಾಡಿದರೆ ಅಶ್ಚರ್ಯವಿಲ್ಲ.

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿತ್ರನಟ ದರ್ಶನ್ ಬಳ್ಳಾರಿಗೆ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಿದ ಬಳಿಕ ಅದರ ಖದರ್ ಬದಲಾಗುತ್ತಿದೆ ಮಾರಾಯ್ರೇ. ಇಲ್ನೋಡಿ, ಜೈಲಿನ ಹೊರಭಾಗದಲ್ಲೂ ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಲಾಗುತ್ತಿದೆ. ದರ್ಶನ್ ಬರುವ ಮೊದಲೇ ಜೈಲು ಹೈ ಸೆಕ್ಯೂರಿಟಿ ಜೋನ್ ಅನಿಸಿಕೊಂಡಿತ್ತು, ಈಗ ಭದ್ರತೆ ಮತ್ತು ಸುರಕ್ಷತೆಯ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದರ್ಶನ್​ಗಾಗಿ​ ಬಳ್ಳಾರಿ ಜೈಲು ಮುಂಭಾಗದಲ್ಲಿ ಜಮಾಯಿಸಿದ ನೂರಾರು ಅಭಿಮಾನಿಗಳು