ಮೈಸೂರು: ಮಹಿಳಾ ಪೊಲೀಸ್​ಗೆ ಮಡಿಲು ತುಂಬಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ

Edited By: ಆಯೇಷಾ ಬಾನು

Updated on: Oct 14, 2024 | 9:45 AM

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ಸ್​ಟೇಬಲ್​ಗೆ ಸೀಮಂತ ಮಾಡಲಾಯಿತು. ಸಿಬ್ಬಂದಿ ಅಕ್ಷತೆ ಹಾಕಿ ಶುಭ ಹಾರೈಸಿದರು. ಇನ್ಸ್‌ಪೆಕ್ಟರ್‌ ಅಜಯ್ ಕುಮಾರ್ ಸೇರಿ ಠಾಣೆಯ ಸಿಬ್ಬಂದಿ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮೈಸೂರು, ಅ.14: ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ಸ್​ಟೇಬಲ್​ಗೆ ಸೀಮಂತ ಮಾಡಲಾಯಿತು. ಸಹೋದ್ಯೋಗಿ ಕಾನ್ಸ್​ಟೇಬಲ್ ಸುನೀತಾಗೆ ಅರಿಶಿನ, ಕುಂಕುಮ ಹಚ್ಚಿ, ಹಸಿರು ಬಳೆ ತೊಡಿಸಿ ಠಾಣೆಯ ಇತರೆ ಮಹಿಳಾ ಸಿಬ್ಬಂದಿ ಸಂಭ್ರಮಿಸಿದರು. ರೇಷ್ಮೆ ಸೀರೆ, ಅಕ್ಕಿ, ಫಲ ತಾಂಬೂಲ ಸಹಿತ ಉಡಿ ತುಂಬುವ ಶಾಸ್ತ್ರ ಕೂಡ ಮಾಡಲಾಯಿತು. ಸಿಬ್ಬಂದಿ ಅಕ್ಷತೆ ಹಾಕಿ ಶುಭ ಹಾರೈಸಿದರು. ಇನ್ಸ್‌ಪೆಕ್ಟರ್‌ ಅಜಯ್ ಕುಮಾರ್ ಸೇರಿ ಠಾಣೆಯ ಸಿಬ್ಬಂದಿ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More