ಹೈದರಾಬಾದ್-ಕರ್ನಾಟಕದ ಪ್ರಾಂತ್ಯದ ಕುರುಬ ನಾಯಕರನ್ನು ಕಡೆಗಣಿಸಿದರೆ ಪಶ್ಚಾತ್ತಾಪ ಪಡಬೇಕಾದೀತು: ಕೆಪಿಸಿಸಿಗೆ ಕನಕಗುರುಪೀಠದ ಶ್ರೀಗಳ ಎಚ್ಚರಿಕೆ

ಹೈದರಾಬಾದ್-ಕರ್ನಾಟಕದ ಪ್ರಾಂತ್ಯದ ಕುರುಬ ನಾಯಕರನ್ನು ಕಡೆಗಣಿಸಿದರೆ ಪಶ್ಚಾತ್ತಾಪ ಪಡಬೇಕಾದೀತು: ಕೆಪಿಸಿಸಿಗೆ ಕನಕಗುರುಪೀಠದ ಶ್ರೀಗಳ ಎಚ್ಚರಿಕೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 28, 2023 | 6:19 PM

ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳುವುದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೊದಲಾದ ನಾಯಕರ ಕರ್ತವ್ಯವಾಗಿದೆ ಎಂದು ಶ್ರೀಗಳು ಹೇಳಿದರು.

ರಾಯಚೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕುರುಬ ಸಮುದಯಕ್ಕೆ ಹೆಚ್ಚಿನ ಆದ್ಯತೆ ಸಿಗದಿರುವುದು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿ ಕನಕಗುರುಪೀಠದ (Kanaka Guru Peetha) ಸಿದ್ದರಾಮಾನಂದಪುರಿ ಶ್ರೀಗಳನ್ನು ಕೆರಳಿಸಿದೆ. ಎರಡನೇ ಪಟ್ಟಿಯಲ್ಲಿ ಹೈದರಾಬಾದ್-ಕರ್ನಾಟಕದ ಪ್ರಾಂತ್ಯದ ಕುರುಬ ಸಮುದಾಯದ (Kuruba community) ಮುಖಂಡರಿಗೆ ಟಿಕೆಟ್ ಗಳನ್ನು ನೀಡುವಲ್ಲಿ ತಾತ್ಸಾರ ಮಾಡಿದರೆ ಮಠವೇ ಒಂದು ತೀರ್ಮಾನ ತೆಗೆದುಕೊಂಡು ಜನರ ಬಳಿಗೆ ಹೋಗುವ ಸನ್ನಿವೇಶವನ್ನು ಕಾಂಗ್ರೆಸ್ ನಾಯಕರು ಎದುರಿಸಬೇಕಾಗುತ್ತದೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ. ಅಂಥ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳುವುದು ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ ಮೊದಲಾದ ನಾಯಕರ ಕರ್ತವ್ಯವಾಗಿದೆ ಎಂದು ಶ್ರೀಗಳು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ