ಸೀರಿಯಲ್ ಶೂಟಿಂಗ್ ಹೇಗೆ ಮಾಡ್ತಾರೆ ಅನ್ನೋದು ಕೇಳಿದಾಗ ಭಯ ಆಗಿತ್ತು: ಅವಿನಾಶ್

Edited By:

Updated on: Sep 09, 2025 | 7:22 PM

28 ವರ್ಷಗಳ ನಂತರ ಹಿರಿಯ ನಟ ಅವಿನಾಶ್ ಅವರು ಕಿರುತೆರೆಗೆ ಕಾಲಿಟ್ಟಿದ್ದಾರೆ. ‘ವಸುದೇವ ಕುಟುಂಬ’ ಸೀರಿಯಲ್​​ನಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಟಿವಿ9 ಜತೆ ಮಾತನಾಡಿದರು. ‘ಅನೇಕ ಬಾರಿ ಧಾರಾವಾಹಿ ಮಾಡಲು ಕರೆದಿದ್ದರು. ನಾನು ಒಪ್ಪುತ್ತಿರಲಿಲ್ಲ’ ಎಂದು ಅವಿನಾಶ್ ಹೇಳಿದ್ದಾರೆ.

28 ವರ್ಷಗಳ ಬಳಿಕ ಹಿರಿಯ ನಟ ಅವಿನಾಶ್ ಅವರು ಕಿರುತೆರೆಗೆ ಕಾಲಿಟ್ಟಿದ್ದಾರೆ. ‘ವಸುದೇವ ಕುಟುಂಬ’ (Vasudeva Kutumba) ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಟಿವಿ9 ಜೊತೆ ಮಾತನಾಡಿದರು. ‘ಹಲವಾರು ಬಾರಿ ಸೀರಿಯಲ್ (Kannada Serial) ಮಾಡಲು ಕರೆದಿದ್ದರು. ನಾನು ಒಪ್ಪುತ್ತಿರಲಿಲ್ಲ. ಯಾಕೆಂದರೆ, ನಾನು ಸಿನಿಮಾದಲ್ಲಿ ಬೆಳೆದವನು. ಧಾರಾವಾಹಿ ಫಾರ್ಮ್ಯಾಟ್ ಬಗ್ಗೆ ನನಗೆ ಗೊತ್ತಿರಲಿಲ್ಲ. ಹೇಗೆ ಶೂಟಿಂಗ್ ಮಾಡುತ್ತಾರೆ ಎಂಬುದನ್ನು ಮಾಳವಿಕಾ ಹೇಳಿದಾಗ ನನಗೆ ಭಯ ಆಗುತ್ತಿತ್ತು. ಬೆಳಗ್ಗೆ ಹೋದರೆ ರಾತ್ರಿ 10 ಗಂಟೆಗೆ ಬರುತ್ತಿದ್ದಳು. ಆ ರೀತಿ ಮಾಡಿ ನನಗೆ ಅಭ್ಯಾಸ ಇಲ್ಲ. ಆದರೆ ವಸುದೇವ ಕುಟುಂಬ ಸೀರಿಯಲ್ ಪಾತ್ರ ನನಗೆ ಇಷ್ಟ ಆಯಿತು. ಮಾಳವಿಕಾ ಕೂಡ ಒತ್ತಾಯಿಸಿದಳು. ಹಾಗಾಗಿ ಒಪ್ಪಿಕೊಂಡೆ’ ಎಂದು ಅವಿನಾಶ್ (Avinash) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More