‘ತಾಳಿ ಕಟ್ಟುವಾಗಲೇ ಹೆಂಡತಿ ಮುಖ ನೋಡಿದ್ದು’: ಹಿರಿಯ ನಟ ದೊಡ್ಡಣ್ಣ ಮದುವೆಯ ರಿಯಲ್ ಸ್ಟೋರಿ
‘ನಾನು ಲವ್ ಮಾಡಿ ಮದುವೆ ಆದವನಲ್ಲ. ಮದುವೆ ಆದ ಮೇಲೆ ಲವ್ ಮಾಡಿದೆ. ದೇಹದ ಸೌಂದರ್ಯ ಮುಖ್ಯವಲ್ಲ. ಆತ್ಮದ ಸೌಂದರ್ಯ ಮುಖ್ಯ’ ಎಂದು ನಟ ದೊಡ್ಡಣ್ಣ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರು ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ. ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಅವರು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮದುವೆ ಆಗಿದ್ದು ಹೇಗೆ? ಆ ಕಾಲದಲ್ಲಿ ಪ್ರೀತಿ-ಪ್ರೇಮ ಹೇಗಿತ್ತು? ತಮ್ಮ ವಿದ್ಯಾಭ್ಯಾಸ ಯಾವ ರೀತಿ ಸಾಗಿ ಬಂತು ಎಂಬುದನ್ನು ಈ ವಿಡಿಯೋದಲ್ಲಿ ದೊಡ್ಡಣ್ಣ ವಿವರಿಸಿದ್ದಾರೆ.
‘ನಾನು ಲವ್ ಮಾಡಿ ಮದುವೆ ಆದವನಲ್ಲ. ಮದುವೆ ಆದ ಮೇಲೆ ಲವ್ ಮಾಡಿದೆ. ಮದುವೆ ಆಗುವ ಹುಡುಗಿಯನ್ನು ನಾನು ನೋಡಿರಲಿಲ್ಲ. ತಾಳಿ ಕಟ್ಟುವಾಗಲೇ ಮುಖ ನೋಡಿದ್ದು! ಹೆಣ್ಣು ನೋಡುವಾಗ ಹುಡುಗಿ ಚೆನ್ನಾಗಿಲ್ಲ ಅಂತ ಹೇಳಲು ಬಾಯಿ ತೆಗೆದಿದ್ದೆ. ಆಗ ಅಣ್ಣ ರಪ್ ಅಂತ ಹೊಡೆದಿದ್ದ. ಇಂಥ ಒಳ್ಳೆಯ ಹುಡುಗಿ ಸಿಕ್ಕಿದ್ದು ನಿನ್ನ ಪುಣ್ಯ ಅಂತ ಹೇಳಿದ್ದ’ ಎಂದು ಆ ದಿನಗಳನ್ನು ದೊಡ್ಡಣ್ಣ ನೆನಪಿಸಿಕೊಂಡಿದ್ದಾರೆ. ‘ದೇಹದ ಸೌಂದರ್ಯ ಮುಖ್ಯವಲ್ಲ. ಆತ್ಮದ ಸೌಂದರ್ಯ ಮುಖ್ಯ. ನಾವು ಎಷ್ಟು ಅನುಸರಿಸಿಕೊಂಡು ಜೀವನ ಮಾಡುತ್ತೇವೆ ಅನ್ನೋದು ಮುಖ್ಯವಾಗುತ್ತದೆ’ ಎಂಬುದು ದೊಡ್ಡಣ್ಣ ಅವರ ಅನುಭವದ ಮಾತುಗಳು.
ಇದನ್ನೂ ಓದಿ:
ಶಂಕರ್ನಾಗ್ಗೆ ಆ್ಯಕ್ಸಿಡೆಂಟ್ ಆಗುವ ಹಿಂದಿನ ದಿನವೇ ಅವರು ಸಾಯುವ ಸೀನ್ ಶೂಟ್ ಮಾಡಿದ್ವಿ; ದೊಡ್ಡಣ್ಣ
ವಿಷ್ಣುವರ್ಧನ್- ಅಂಬರೀಶ್ ಸ್ನೇಹ ಹೇಗಿತ್ತು?; ಹಿರಿಯ ನಟ ದೊಡ್ಡಣ್ಣ ವ್ಯಾಖ್ಯಾನಿಸಿದ್ದು ಹೀಗೆ..