ಜಂಬೂ ಸವಾರಿಯಂದು ಜಯಚಾಮರಾಜೇಂದ್ರ ಒಡೆಯರ್ ವಿಗ್ರಹದ ಕೈಯಲ್ಲಿದ್ದ ಖಡ್ಗ ಮತ್ತೊಮ್ಮೆ ತುಂಡಾಗಿದೆ!
ಪ್ರತಿಮೆಯ ಕೈಯಲ್ಲಿದ್ದ ಖಡ್ಗದ ಅರ್ಧ ಭಾಗ ತುಂಡಾಗಿದೆ. ಅದು ಹೇಗಾಯಿತು ಅನ್ನೋದು ಇನ್ನೂ ಗೊತ್ತಾಗಿಲ್ಲ. ಜನ ಭಾರಿ ಸಂಖ್ಯೆಯಲ್ಲಿ ನೆರೆದಿರುವಾಗಲೇ ಖಡ್ಗ ತುಂಡಾಗಿರೋದು ಕಾಕತಾಳೀಯವೇ ಹೊರತು ಬೇರೇನೂ ಅಲ್ಲ.
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಶುಕ್ರವಾರದಂದು ಜಂಬೂ ಸವಾರಿಯೊಂದಿಗೆ ಸುಸೂತ್ರವಾಗಿ ಕೊನೆಗೊಂಡಿದೆ. ಕೋವಿಡ್-19 ಮೂರನೇ ಅಲೆಯ ಭೀತಿ ಇನ್ನೂ ದೂರವಾಗಿಲ್ಲ. ಹಾಗಾಗಿ, ಜಂಬೂ ಸವಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬಾರದೆಂಬ ಸರ್ಕಾರದ ಎಚ್ಚರಿಕೆ ಹೊರತಾಗಿಯೂ ಸಹಸ್ರಾರು ಜನ ಮೈಸೂರಿನಲ್ಲಿ ಜಮಾವಣೆಗೊಂಡಿದ್ದರು. ಜಂಬೂ ಸವಾರಿಯನ್ನೂ ಕೇವಲ ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು.
ಆದರೆ, ಕಳೆದ ವರ್ಷ ಸಾಂಕ್ರಮಿಕ ಪಿಡುಗಿನ ಹಿನ್ನೆಲೆಯಲ್ಲೇ ಮೈಸೂರು ದಸರಾ ಉತ್ಸವವನ್ನು ಕೇವಲ ಸಾಂಕೇತಿಕವಾಗಿ ಆಚರಿಸಲಾಗಿತ್ತು. ಹಾಗಾಗಿ ಈ ಬಾರಿ ಜಂಬೂ ಸವಾರಿ ನೋಡಲೇಬೇಕೆಂಬ ಉತ್ಸುಕತೆ ಜನರಲ್ಲಿ ಜಾಸ್ತಿಯಾಗಿತ್ತು. ಶುಕ್ರವಾರ ಮೈಸೂರು ಅರಮನೆ ಎದುರುಗಡೆ ಭಾರಿ ಜನಸ್ತೋಮ. ಆ ಸಂದರ್ಭದಲ್ಲೇ ಅವಗಢವೊಂದು ನಡೆದು ಹೋಗಿದೆ.
ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರುಗಡೆಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಇರೋದು ನಿಮಗೆ ಗೊತ್ತಿದೆ. ಆ ಪ್ರತಿಮೆಯ ಕೈಯಲ್ಲಿದ್ದ ಖಡ್ಗದ ಅರ್ಧ ಭಾಗ ತುಂಡಾಗಿದೆ. ಅದು ಹೇಗಾಯಿತು ಅನ್ನೋದು ಇನ್ನೂ ಗೊತ್ತಾಗಿಲ್ಲ. ಜನ ಭಾರಿ ಸಂಖ್ಯೆಯಲ್ಲಿ ನೆರೆದಿರುವಾಗಲೇ ಖಡ್ಗ ತುಂಡಾಗಿರೋದು ಕಾಕತಾಳೀಯವೇ ಹೊರತು ಬೇರೇನೂ ಅಲ್ಲ.
ಗಮನಿಸಬೇಕಾದ ಸಂಗತಿಯೆಂದರೆ ಹಿಂದೆಯೂ ಖಡ್ಗ ತುಂಡಾಗಿತ್ತು. ಪ್ರಾಯಶಃ ಆಗ ಅದರ ಜೋಡಣೆ ಸರಿಯಾಗಿರಲಿಕ್ಕಿಲ್ಲ.
ಇದನ್ನೂ ಓದಿ: Viral Video: ಸುಮಧುರ ಕಂಠದಲ್ಲಿ ಹಾಡು ಹೇಳಿ ರೋಗಿಗೆ ಧೈರ್ಯ ತುಂಬಿದ ನರ್ಸ್; ನೆಟ್ಟಿಗರೆಲ್ಲಾ ಭಾವುಕರಾದ ವಿಡಿಯೋವಿದು