AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ? ವಿವರಿಸಿದ ಹಿರಿಯ ವಕೀಲರು

ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ? ವಿವರಿಸಿದ ಹಿರಿಯ ವಕೀಲರು

Mangala RR
| Edited By: |

Updated on: May 15, 2026 | 10:35 PM

Share

ಬೇರೆ ಪ್ರಕರಣದಲ್ಲಿ ಇರುವ ಅನೇಕರಿಗೆ ಜಾಮೀನು ಸಿಕ್ಕಿದೆ. ಆದರೆ ದರ್ಶನ್ ಅವರಿಗೆ ಮಾತ್ರ ಜಾಮೀನು ಸಿಗುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ಹಿರಿಯ ವಕೀಲ ಬಾಲನ್ ಅವರು ಉತ್ತರ ನೀಡಿದ್ದಾರೆ. ‘ಕೊಲೆ ಪ್ರಕರಣ ಆಗಿದ್ದರೂ ಪ್ರತಿ ಕೇಸ್ ಕೂಡ ಭಿನ್ನವಾಗಿರುತ್ತದೆ’ ಎಂದು ಅವರು ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ (Darshan) ಅವರು ಜಾಮೀನು ಪಡೆಯಲು ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲ ಆಗುತ್ತಿವೆ. ದರ್ಶನ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದರಿಂದಾಗಿ ದರ್ಶನ್ ಅವರು ಜೈಲು ವಾಸ ಮುಂದುವರಿಸುವುದು ಅನಿವಾರ್ಯ ಆಗಿದೆ. ಬೇರೆ ಪ್ರಕರಣದಲ್ಲಿ ಇರುವ ಅನೇಕರಿಗೆ ಜಾಮೀನು (Bail) ಸಿಕ್ಕಿದೆ. ಆದರೆ ದರ್ಶನ್ ಅವರಿಗೆ ಮಾತ್ರ ಜಾಮೀನು ಸಿಗುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ಹಿರಿಯ ವಕೀಲ ಬಾಲನ್ ಅವರು ಉತ್ತರ ನೀಡಿದ್ದಾರೆ. ‘ಕೊಲೆ ಪ್ರಕರಣ ಆಗಿದ್ದರೂ ಪ್ರತಿ ಕೇಸ್ ಕೂಡ ಭಿನ್ನವಾಗಿರುತ್ತದೆ. ಕೆಲವು ಪ್ರಕರಣಗಳಲ್ಲಿ ಪ್ರತ್ಯಕ್ಷ ಸಾಕ್ಷಿ ಇರುವುದಿಲ್ಲ. ಪೊಲೀಸರಿಗೆ ಕಾನೂನಿನ ಅರಿವು ಇದೆ. 90 ದಿನದ ಒಳಗೆ ಯಾಕೆ ಚಾರ್ಜ್​ಶೀಟ್ ಹಾಕಿಲ್ಲ ಎಂದರೆ ಏನೋ ಆಗಿರಬಹುದು. ಕೆಲವು ಕಡೆ ಕೊಲೆ ಆದರೂ ಬಂಧನ ಆಗುವುದಿಲ್ಲ. ಇದು ಪ್ರಜಾಪ್ರಭುತ್ವ’ ಎಂದು ಬಾಲನ್ (Lawyer Balan) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Mangala RR
Mangala RR