ಸುದ್ದಿಗೋಷ್ಟಿಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳ ಪರ ಬ್ಯಾಟ್ ಬೀಸಿ ಅಚ್ಚರಿ ಮೂಡಿಸಿದ ಹೆಚ್ ವಿಶ್ವನಾಥ್
ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ವಿಶ್ವನಾಥ್ ಅವರು, ಖರ್ಗೆ ಬಹಳ ಎತ್ತರದ ನಾಯಕ, ಅವರ ಬಗ್ಗೆ ಮಾತಾಡುವಷ್ಟು ದೊಡ್ಡವ ತಾನಲ್ಲ, ಅವರಿಗೆ ಹಲವಾರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶವಿತ್ತು, ಅದರೆ ಅದು ಸಾಧ್ಯವಾಗಲಿಲ್ಲ ಅನ್ನುತ್ತಾರೆ. ಅಂದರೆ ಅವರು ತಮ್ಮ ಮತವನ್ನು ಕಾಂಗ್ರೆಸ್ ಪರವೂ ಚಲಾಯಿಸುತ್ತಾರೆ! ಈಗ ಹೇಳಿ ಅವರಿಗಿಂತ ಮಿಗಿಲಾದ ಪಕ್ಷಾತೀತ ರಾಜಕಾರಣಿ ಸಿಗೋದು ಸಾಧ್ಯವೇ?
ಮೈಸೂರು: ಜಾತ್ಯಾತೀತ ಪಕ್ಷ ಅಥವಾ ವ್ಯಕ್ತಿ ಅಂತ ನಾವು ಹೇಳಬಹುದಾದರೆ ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಹೆಚ್ ವಿಶ್ವನಾಥ್ (H Vishwanath) ಅವರನ್ನು ಪಕ್ಷಾತೀತ ರಾಜಕಾರಣಿ ಅನ್ನಬಹುದು ಮಾರಾಯ್ರೇ. ಮೈಸೂರಲ್ಲಿ ಇಂದು ಅವರು ಪತ್ರಿಕಾ ಗೋಷ್ಟಿಯಲ್ಲಿ ಆಡಿದ ಮಾತುಗಳನ್ನು ಕೇಳಿಸಿಕೊಂಡರೆ ಈ ಮಾತು ಸುಲಭಕ್ಕೆ ಅರ್ಥವಾಗುತ್ತದೆ. ಮೈಸೂರಲ್ಲಿ ಯಾರು ಗೆಲ್ಲುತ್ತಾರೆ ಅಂತ ಕೇಳಿದರೆ ಅವರು ಮಹಾರಾಜರು (ಯದುವೀರ್ ಕೃಷ್ಣದತ್ ಒಡೆಯರ್) (Yaduveer Krishna Dutt Wodeyar) ಅನ್ನುವ ಅವರು ಮಂಡ್ಯದಿಂದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಎಂದು ಹೇಳುತ್ತಾರೆ. ಅಲ್ಲಿಗೆ ಅವರ ವೋಟು ಬಿಜೆಪಿಗೊಂದು, ಜೆಡಿಎಸ್ ಗೊಂದು ಬಿದ್ದಂತಾಯಿತು.
ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ವಿಶ್ವನಾಥ್ ಅವರು, ಖರ್ಗೆ ಬಹಳ ಎತ್ತರದ ನಾಯಕ, ಅವರ ಬಗ್ಗೆ ಮಾತಾಡುವಷ್ಟು ದೊಡ್ಡವ ತಾನಲ್ಲ, ಅವರಿಗೆ ಹಲವಾರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶವಿತ್ತು, ಅದರೆ ಅದು ಸಾಧ್ಯವಾಗಲಿಲ್ಲ ಅನ್ನುತ್ತಾರೆ. ಅಂದರೆ ಅವರು ತಮ್ಮ ಮತವನ್ನು ಕಾಂಗ್ರೆಸ್ ಪರವೂ ಚಲಾಯಿಸುತ್ತಾರೆ! ಈಗ ಹೇಳಿ ಅವರಿಗಿಂತ ಮಿಗಿಲಾದ ಪಕ್ಷಾತೀತ ರಾಜಕಾರಣಿ ಸಿಗೋದು ಸಾಧ್ಯವೇ?
ಕೊನೆಯಲ್ಲಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಖಂಡಿತ ಜನರಿಗೆ ನೆರವಾಗಿವೆ ಅಂತ ಹೇಳುತ್ತಾ ಆ ಪಕ್ಷದ ಪರ ಮತ್ತಷ್ಟು ಬ್ಯಾಟ್ ಬೀಸುತ್ತಾರೆ!!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿಯಿಂದ ವಿಮುಖರಾಗಿರುವ ಹೆಚ್ ವಿಶ್ವನಾಥ್ ಮನೆಗೆ ಭೇಟಿ ನೀಡಿದ ಯದುವೀರ್ ಕೃಷ್ಣದತ್ ಒಡೆಯರ್