ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ಸರಣಿ ಅಪಘಾತ, ಪ್ರಾಣಹಾನಿಯಿಲ್ಲ, ರಸ್ತೆ ಸಂಚಾರಕ್ಕೆ ಅಡಚಣೆ

ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ಸರಣಿ ಅಪಘಾತ, ಪ್ರಾಣಹಾನಿಯಿಲ್ಲ, ರಸ್ತೆ ಸಂಚಾರಕ್ಕೆ ಅಡಚಣೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 13, 2022 | 10:36 AM

ಆಟೋನಲ್ಲಿ ಸಿಲುಕಿಕೊಂಡುಬಿಟ್ಟಿದ್ದ ಆದರ ಚಾಲಕನನ್ನು ಹೊರಗೆಳೆಯಲು ಬಹಳ ಪ್ರಯಾಸಪಡಬೇಕಾಯಿತು. ಆದರೆ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಆಗಿದ್ದರಿಂದ ಜನ ತೊಂದರೆ ಅನುಭವಿಸಿದರು.

Bengaluru: ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದ (Satellite Bus Stop) ಮೂಲಕ ಆಫೀಸುಗಳಿಗೆ (office) ಹೋಗುವವರು, ಬೇರೆ ಊರುಗಳಿಗೆ ಹೋಗುವರು ಸೋಮವಾರ ಬೆಳಗ್ಗೆ ತಾವು ಎದ್ದ ಘಳಿಗೆಯನ್ನು ಶಪಿಸಿಕೊಳ್ಳುತ್ತಿದ್ದರು. ಬೆಳಗಿನ ಜಾವದಲ್ಲೇ ಇಲ್ಲಿನ ಪ್ರಮುಖ ರಸ್ತೆಯಲ್ಲಿ ಕ್ಯಾಂಟರ್, ಆಟೋ ಮತ್ತು ಬಿ ಎಮ್ ಟಿ ಸಿ (BMTC) ಬಸ್ಸನ್ನೊಳಗೊಂಡ ಸರಣಿ ಅಪಘಾತ ಜರುಗಿತು. ಅದೃಷ್ಟವಶಾತ್ ಪ್ರಾಣಹಾನಿಯೇನೂ ಅಗಿಲ್ಲ. ಆಟೋನಲ್ಲಿ ಸಿಲುಕಿಕೊಂಡುಬಿಟ್ಟಿದ್ದ ಆದರ ಚಾಲಕನನ್ನು ಹೊರಗೆಳೆಯಲು ಬಹಳ ಪ್ರಯಾಸಪಡಬೇಕಾಯಿತು. ಆದರೆ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಆಗಿದ್ದರಿಂದ ಜನ ತೊಂದರೆ ಅನುಭವಿಸಿದರು. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.