ಬೆಂಗಳೂರು ಸ್ಯಾಟೆಲೈಟ್ ಬಸ್ ನಿಲ್ದಾಣದ ಬಳಿ ಬೆಳ್ಳಂಬೆಳಿಗ್ಗೆ ಸರಣಿ ಅಪಘಾತ, ಒಬ್ಬನಿಗೆ ಮಾತ್ರ ಗಾಯ

Updated on: Mar 15, 2025 | 10:20 AM

ಪ್ರಾಥಮಿಕ ಮಾಹಿತಿಯ ಪ್ರಕಾರ ಕ್ಯಾಂಟರ್ ಚಾಲಕ ಮದ್ಯದ ಅಮಲಿನಲ್ಲಿ ವಾಹನ ಓಡಿಸುತ್ತಿದ್ದ. ಅಪ್ಪಚ್ಚಿಯಾಗಿರುವ ಆಟೋರಿಕ್ಷಾದ ಚಾಲಕ ಅಪಘಾತ ನಡೆದ ಸಮಯದಲ್ಲಿ ಅದರೊಳಗೆ ಕೂತಿರಲಿಲ್ಲ. ಆಟೋರಿಕ್ಷಾದ ಸ್ಥಿತಿ ನೋಡಿದರೆ ಅಪಘಾತದ ಭೀಕರತೆ ಅರ್ಥವಾದೀತು. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಸ್ಟೇಷನ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದೆ.

ಬೆಂಗಳೂರು, 15 ಮಾರ್ಚ್: ಇಂದು ಬೆಳಗ್ಗೆ ಸುಮಾರು 5 ಗಂಟೆಗೆ ನಗರದ ಬಾಪೂಜಿನಗರದಲ್ಲಿರುವ ಸ್ಯಾಟೆಲೈಟ್ ಬಸ್ ನಿಲ್ದಾಣದ (Satellite bus stop) ಬಳಿ ನಡೆದಿರುವ ಘಟನೆ ಇದು. ಕ್ಯಾಂಟರ್ ಒಂದು ಮೈಸೂರಿಗೆ ಹೊರಡುತ್ತಿದ್ದ ಕೆಎಸ್​ಆರ್​ಟಿಸಿ ಐರಾವತ ಬಸ್ಸು ಸೇರಿದಂತೆ, ಕಾರು, ಲಾರಿ, ಆಟೋ ಮತ್ತು ಬೈಕ್ ಗೆ ಗುದ್ದಿ ಸರಣಿ ಅಪಘಾತ ಸಂಭವಿಸಿದೆ. ಕ್ಯಾಂಟರ್ ನಿಂದ ಗುದ್ದಿಸಿಕೊಂಡ ಲಾರಿ ತನ್ನ ಮುಂದಿದ್ದ ನಿಂತಿದ್ದ ಆಟೋ ಮೇಲೆ ಹತ್ತಿದ ಕಾರಣ ಅದು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದೆ. ಸಮಾಧಾನಕರ ಸಂಗತಿಯೆಂದರೆ ಇಷ್ಟು ಭಯನಕ ಘಟನೆ ನಡೆದರೂ ಒಬ್ಬ ವ್ಯಕ್ತಿ ಮಾತ್ರ ಗಾಯಗೊಂಡು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೆಎಸ್​ಆರ್​ಟಿಸಿ ಬಸ್ ಚಾಲಕನಿಗೆ ಫಿಟ್ಸ್, ಸರಣಿ ಅಪಘಾತ: 40ಕ್ಕೂ ಹೆಚ್ಚು ಪ್ರಯಾಣಿಕರು ಜಸ್ಟ್​ ಮಿಸ್