ಉತ್ತರ ಭಾರತ ಹಲವಾರು ಪ್ರದೇಶಗಳಲ್ಲಿ ಮೈಕೊರೆಯುವ ಶೀತಗಾಳಿಯಿಂದ ಜನ ತತ್ತರಿಸಿದ್ದಾರೆ, ಮುಂದಿನ ಮೂರು ದಿನ ಇದೇ ಸ್ಥಿತಿ
ಭಾರತದ ಹವಾಮಾನ ಇಲಾಖೆಯ ಮೂಲಕ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶ ಮೊದಲಾದ ರಾಜ್ಯಗಳ ಹಲವಾರು ಭಾಗಗಳಲ್ಲಿ ತೀವ್ರಸ್ವರೂಪದ ಶೀತಗಾಳಿ ಬೀಸುತ್ತಿದೆ ಮತ್ತು ಜನರು ಚಳಿಗೆ ಥರಗುಟ್ಟುತ್ತಿದ್ದಾರೆ.
ಕಳೆದೆರಡು ವರ್ಷಗಳಿಂದ ಎಲ್ಲ ಋತುಗಳಲ್ಲಿ ಆಗುತ್ತಿರುವ ಹವಾಮಾನ ಬದಲಾವಣೆ ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ತಾಪಮಾನ ಹಿಂದಿನ ವರ್ಷಗಳಿಗಿಂತ ಒಂದೆರಡು ಡಿಗ್ರೀ ಸೆಲ್ಸಿಯಷ್ಟು ಹೆಚ್ಚುತ್ತಿದೆ. ಮಳೆಗಾಲದಲ್ಲಿ ಕುಂಭದ್ರೋಣ ಸಾಮಾನ್ಯವಾಗಿ ದೇಶದ ನಾನಾಭಾಗಗಳಲ್ಲಿ ಪ್ರವಾಹಗಳು ತಲೆದೋರುತ್ತಿವೆ. ಈಗ ನಾವು ಚಳಿಗಾಲದಲ್ಲಿದ್ದೇವೆ. ಈ ಬಾರಿಯ ಚಳಿ ಮೈ ಕೊರೆಯುವಂತಿದೆ. ಉತ್ತರ ಭಾರತದ ಕೆಲ ರಾಜ್ಯಗಳು ಮತ್ತು ರಾಜಸ್ತಾನದಲ್ಲಿ ತಾಪಮಾನ ಶೂನ್ಯ ಡಿಗ್ರಿ ಸೆಲ್ಸಿಯೆಸ್ಗೆ ಹತ್ತಿರವಾಗುತ್ತಿದೆ.
ಭಾರತದ ಹವಾಮಾನ ಇಲಾಖೆಯ ಮೂಲಕ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶ ಮೊದಲಾದ ರಾಜ್ಯಗಳ ಹಲವಾರು ಭಾಗಗಳಲ್ಲಿ ತೀವ್ರಸ್ವರೂಪದ ಶೀತಗಾಳಿ ಬೀಸುತ್ತಿದೆ ಮತ್ತು ಜನರು ಚಳಿಗೆ ಥರಗುಟ್ಟುತ್ತಿದ್ದಾರೆ. ಬುಧವಾರ ಬೆಳಿಗ್ಗೆ ದೆಹಲಿಯ ಸಫ್ದರ್ ಜಂಗ್ ಪ್ರದೇಶದಲ್ಲಿ 4.6 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ.
ಇದರ ಜೊತೆಗೆ ಕಳೆದ ಮೂರು ದಿನಗಳಿಂದ ಪಂಜಾಬ, ಹರಿಯಾಣ ಮತ್ತು ಉತ್ತರ ರಾಜಸ್ತಾನ ಪ್ರದೇಶಗಳಲ್ಲಿ ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಕಡಿಮೆ ಉಷ್ಣಾಂಶದ ಆಗ್ನೇಯ ಮಾರುತವು 10-15 ಕಿಮೀ/ಗಂಟೆ ವೇಗದಲ್ಲಿ ಬೀಸುತ್ತಿದ್ದು ಶೀತಗಾಳಿಯ ಅತಿರಿಕ್ತ ಪರಿಣಾಮಗಳನ್ನು ಹೆಚ್ಚಿಸಿದೆ. ಇದೇ ಸ್ಥಿತಿಯು ಮುಂದಿನ ಮೂರು ದಿನಗಳವರೆಗೆ ಮುಂದುವರಿಯಲಿದ್ದು ಅದಾದ ನಂತರವೇ ಸ್ಥಿತಿಯಲ್ಲಿ ಕ್ರಮೇಣ ಸುಧಾರಣೆಯಾಗಲಿದೆ ಎಂದು ಐ ಎಮ್ ಡಿ ಹೇಳಿದೆ.
ದೇಶದಲ್ಲೇ ಅತಿ ಕಡಿಮೆ ಉಷ್ಣಾಂಶವು ರಾಜಸ್ತಾನದ ಚುರುನಲ್ಲಿ -1.1 ಡಿಗ್ರಿ ಸೆ. ದಾಖಲಾಗಿದ್ದರೆ, ಅಮೃತಸರ್ ನಲ್ಲಿ 0.7 ಡಿಗ್ರಿ ಸೆ. ಮತ್ತು ಗಂಗಾನಗರ್ ನಲ್ಲಿ 1.1 ಡಿಗ್ರಿ ಸೆ ದಾಖಲಾಗಿದೆ.