SRK Birthday: ಶಾರುಖ್ ಖಾನ್ಗೆ 57ನೇ ಜನ್ಮದಿನದ ಸಂಭ್ರಮ; ನೆಚ್ಚಿನ ನಟನನ್ನು ನೋಡಲು ಮನೆ ಮುಂದೆ ಜನಸಾಗರ
Shah Rukh Khan Birthday: ‘ಮನ್ನತ್’ ಎದುರು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮನೆಯ ಬಾಲ್ಕನಿಗೆ ಬಂದ ಶಾರುಖ್ ಖಾನ್ ಅವರು ಎಲ್ಲರತ್ತ ಕೈ ಬೀಸಿದರು.
ನಟ ಶಾರುಖ್ ಖಾನ್ (Shah Rukh Khan) ಅವರು ಇಂದು (ನ.2) 57ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಮುಂಬೈ ನಿವಾಸ ‘ಮುನ್ನತ್’ (Mannat) ಎದುರು ಮಧ್ಯ ರಾತ್ರಿಯೇ ಸಾವಿರಾರು ಅಭಿಮಾನಿಗಳು ನೆರೆದಿದ್ದರು. ನೆಚ್ಚಿನ ನಟನನ್ನು ನೇರವಾಗಿ ನೋಡಿ ಹುಟ್ಟುಹಬ್ಬದ (Shah Rukh Khan Birthday) ಶುಭಾಶಯ ತಿಳಿಸಬೇಕು ಎಂಬ ಆಸೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮನೆಯ ಬಾಲ್ಕನಿಗೆ ಬಂದ ಶಾರುಖ್ ಖಾನ್ ಅವರು ಎಲ್ಲರತ್ತ ಕೈ ಬೀಸಿದರು. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ‘ಪಠಾಣ್’ ಚಿತ್ರದ ಟೀಸರ್ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 02, 2022 02:47 PM