
[lazy-load-videos-and-sticky-control id=”Wr0nGHYnhyU”]
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೃಷ್ಟಿಯಾಗ್ತಿದೆ ಮತ್ತೊಂದು ಧಾರಾವಿ ಎಂಬಂತಿದೆ ಶಾಂತಲಾನಗರ ವಾರ್ಡ್ನ ಪರಿಸ್ಥಿತಿ. ಕೊರೊನಾ ಅಟ್ಟಹಾಸಕ್ಕೆ ಏಷ್ಯಾದ ಅತಿ ದೊಡ್ಡ ಸ್ಲಂ ಧಾರಾವಿ ನಲುಗಿ ಹೋಗಿತ್ತು.
ಈಗ ಇದೇ ರೀತಿ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಶಾಂತಲಾನಗರ ವಾರ್ಡ್ ಮತ್ತೊಂದು ಧಾರಾವಿಯಾಗಿ ಸೃಷ್ಟಿಯಾಗುತ್ತಿದೆಯಾ? ಎಂಬ ಆತಂಕ ಉಂಟಾಗಿದೆ. ಏಕೆಂದರೆ ಇಲ್ಲಿ ಕೇವಲ 5 ದಿನದಲ್ಲಿ 439 ಕೇಸ್ಗಳು ಪತ್ತೆಯಾಗಿವೆ.
ಕಳೆದ 3-4 ದಿನಗಳಿಂದ ಬೆಂಗಳೂರಿನಲ್ಲಿ ದಾಖಲಾಗುತ್ತಿರುವ ಕೇಸ್ಗಳಲ್ಲಿ ಈ ವಾರ್ಡ್ನದ್ದೇ ಅತಿ ಹೆಚ್ಚು ಪಾಲಿದೆ. ಹೀಗಾಗಿ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಸೋಂಕು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮುಂಬೈನ ಧಾರಾವಿ ಸ್ಲಂ ಮಾದರಿ ಸೋಂಕು ಹೆಚ್ಚಳವಾಗಬಹುದು. ಹೆಚ್ಚಾದ ನಂತರ ಅದನ್ನು ಕಂಟ್ರೋಲ್ ಮಾಡುವುದು ಕಷ್ಟವಾಗುತ್ತೆ..
Published On - 1:38 pm, Mon, 20 July 20