ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ

Edited By:

Updated on: Sep 25, 2026 | 9:34 PM

ಶಾರ್ಜಾದಲ್ಲಿ ಕೊಲೆಯಾದ ಉಡುಪಿ ಮೂಲದ ಪ್ರಕಾಶ್ ಕುಂದರ್ ಅವರ ಮೃತದೇಹ ಮೂರು ತಿಂಗಳ ಬಳಿಕ ತವರಿಗೆ ತಲುಪಿದೆ. ಮಂಗಳೂರಿನಿಂದ ಕುಂದಾಪುರಕ್ಕೆ ಬಂದ ಶವಪೆಟ್ಟಿಗೆಯನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮೃತರ ಪತ್ನಿ ಟೀನಾ ಮತ್ತು ಪುತ್ರ ನಾಪತ್ತೆಯಾಗಿದ್ದು, ಇವರ ಪತ್ತೆ ಹಾಗೂ ಸಮಗ್ರ ತನಿಖೆಗೆ ಕುಟುಂಬಸ್ಥರು ಸರಕಾರ ಮತ್ತು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಉಡುಪಿ, ಸೆಪ್ಟೆಂಬರ್​​ 25: ಶಾರ್ಜಾದಲ್ಲಿ ಹತ್ಯೆಯಾದ ಉಡುಪಿ ಮೂಲದ ಪ್ರಕಾಶ್ ಕುಂದರ್ ಅವರ ಶವ ಮೂರು ತಿಂಗಳ ಬಳಿಕ ತಾಯ್ನಾಡಿಗೆ ತಲುಪಿದೆ. ಜುಲೈ ತಿಂಗಳಿನಲ್ಲಿ ಕೊಲೆಗೀಡಾಗಿದ್ದ ಪ್ರಕಾಶ್​​ ಅವರ ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ, ಎರಡು ಚೀಲಗಳಲ್ಲಿ ತುಂಬಿ ಕಾರಿನ ಡಿಕ್ಕಿಯಲ್ಲಿ ಇಡಲಾಗಿತ್ತು. ಈ ಘೋರ ಹತ್ಯೆ ಬಳಿಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನಪ್ರತಿನಿಧಿಗಳ ಸತತ ಪ್ರಯತ್ನ ಬೆನ್ನಲ್ಲೇ ಇದೀಗ ಮುಚ್ಚಿದ ಪೆಟ್ಟಿಗೆಯಲ್ಲಿ ಶವವನ್ನು ತವರಿಗೆ ತರಲಾಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಶವದ ಪೆಟ್ಟಿಗೆಯನ್ನು ಕುಂದಾಪುರ ಪೇಟೆಯಲ್ಲಿರುವ ಪ್ರಕಾಶ್ ಅವರ ಮನೆಗೆ ತರಲಾಯಿತು. ಈ ವೇಳೆ ಶವವನ್ನು ಕಂಡು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಶಾಸ್ತ್ರೀ ಸರ್ಕಲ್ ಬಳಿಯ ಪ್ರೊಟೆಸ್ಟೆಂಟ್ ಸಿಎಸ್ಐ ಕೃಪಾ ದಫನ್ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಪ್ರಜ್ವಲ್ ಅಮೀನ್​, ಉಡುಪಿ

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More