ಶಿರೂರು ಗುಡ್ಡ ಕುಸಿತ: ಪರಿಹಾರದ ಪ್ರಶ್ನೆ ಬಂದಾಗ ನುಣುಚಿಕೊಳ್ಳುವ ಪ್ರಯತ್ನ ಮಾಡಿದ ಕುಮಾರಸ್ವಾಮಿ

|

Updated on: Jul 20, 2024 | 6:23 PM

ಇಂಥ ಸಂದರ್ಭಗಳಲ್ಲಿ ರಾಜ್ಯದ ಜವಾಬ್ದಾರಿ ಏನು ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಪರಿಹಾರಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು. ಅದು ಸರಿ, ಅದರೆ ಕುಮಾರಸ್ವಾಮಿಯವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅವೈಜ್ಞಾನಿಕ ಕಾಮಗಾರಿಯನ್ನು ಒಪ್ಪಿಕೊಳ್ಳದಿರುವುದು ಕನ್ನಡಿಗರಲ್ಲಿ ಖಂಡಿತವಾಗಿ ಅಚ್ಚರಿ ಮೂಡಿಸುತ್ತದೆ.

ಕಾರವಾರ: ಶಿರೂರು ಬಳಿ ಗುಡ್ಡ ಕುಸಿದು ಅನಾಹುತ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ದುರ್ಘಟನೆಗೆ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿ ಕಾರಣವಾಗಿದ್ದರೂ ಅದನ್ನು ಒಪ್ಪಿಕೊಳ್ಳುವ ಉದಾರತೆ ಪ್ರದರ್ಶಿಸಲಿಲ್ಲ. ಅನಾಹುತಕ್ಕೆ ಕೇಂದ್ರ ಸರ್ಕಾರ ಹೊಣೆಯೋ ಅಥವಾ ರಾಜ್ಯ ಸರ್ಕಾರ ಹೊಣೆಯೋ ಆಮೇಲೆ ಚರ್ಚಿಸೋಣ ಅಂತ ಪತ್ರಕರ್ತರ ಪ್ರಶ್ನೆಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಅವರು ಮಾಡಿದರು. ಡಿಕೆ ಶಿವಕುಮಾರ್ ಬರೀ ಭೇಟಿ ನೀಡಿದರೆ ಸಾಲಲ್ಲ, ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಅಂತ ಹೇಳಿದ್ದಾರೆ ಅಂತ ಹೇಳಿದ್ದ`qಕ್ಕೆ ಕುಮಾರಸ್ವಾಮಿ, ಅದೆಲ್ಲ ಹಾಗಾಗಲ್ಲ, ಅದಕ್ಕೆ ಕೆಲ ನಿಯಮಾವಳಿಗಳಿವೆ ಅವುಗಳನ್ನು ಪಾಲಿಸಬೇಕಾಗುತ್ತದೆ ಎನ್ನುತ್ತಾರೆ. ಎಲ್ಲಕ್ಕೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ರಾಜ್ಯ ಸರ್ಕಾರಕ್ಕೆ ಅಭ್ಯಾಸವಾಗಿದೆ ಎಂದ ಕುಮಾರಸ್ವಾಮಿ 2018ರಲ್ಲಿ ತಾನು ಮುಖ್ಯಮಂತ್ರಿಯಾಗಿದ್ದಾಗ ಪರಿಹಾರ ನೀಡಿದ್ದೆ, ಕೇಂದ್ರದ ನೆರವಿಗಾಗಿ ಕಾದಿರಲಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ಸರ್ಕಾರದ ಹಗರಣಗಳನ್ನು ತನಿಖೆ ಮಾಡಿಸುವೆನೆನ್ನುವ ಸಿದ್ದರಾಮಯ್ಯ ಇಷ್ಟು ದಿನ ಕಾದಿದ್ದೇಕೆ? ಕುಮಾರಸ್ವಾಮಿ

Follow us on