AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ

Daily Devotional: ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ

ವಿವೇಕ ಬಿರಾದಾರ
|

Updated on: Dec 25, 2024 | 7:11 AM

ಈ ಲೇಖನವು ಮನೆಯಲ್ಲಿ ಶಿವಲಿಂಗವನ್ನು ಪೂಜಿಸುವುದರ ಮಹತ್ವ, ಸರಿಯಾದ ಎತ್ತರ ಮತ್ತು ಪೂಜಾ ವಿಧಾನಗಳ ಬಗ್ಗೆ ತಿಳಿಸುತ್ತದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿಯವರ ಮಾರ್ಗದರ್ಶನದೊಂದಿಗೆ, ಆತ್ಮಲಿಂಗ ಮತ್ತು ಜ್ಯೋತಿರ್ಲಿಂಗಗಳ ಪವಿತ್ರತೆಯನ್ನು ಸಹ ವಿವರಿಸಲಾಗಿದೆ. ಶಿವನ ವಿವಿಧ ಹೆಸರುಗಳು ಮತ್ತು ಅವನನ್ನು ಲಿಂಗ ರೂಪದಲ್ಲಿ ಪೂಜಿಸುವ ಸಂಪ್ರದಾಯವನ್ನು ಚರ್ಚಿಸಲಾಗಿದೆ.

ಶಿವ ದುಷ್ಟರ ಶಿಕ್ಷಕ ಅಥವಾ ಸಂಹಾರಕ. ಶಿವನಿಗೆ ಅನೇಕ ಹೆಸರುಗಳಿವೆ. ಹರ, ಪರಮಾತ್ಮ, ನೀಲಕಂಠ, ರುದ್ರ, ಸ್ಮಶಾನ ರುದ್ರ, ಶಂಖಪ್ರಭಶ್ಯ ಅಂತ ಹಲವು ಹೆಸರುಗಳಿವೆ. ಶಿವನನನ್ನು ಲಿಂಗದ ರೂಪದಲ್ಲಿ ಎಲ್ಲಕಡೆ ಪೂಜೆ ಮಾಡಲಾಗುತ್ತದೆ. ಆತ್ಮಲಿಂಗ ಮತ್ತು ಜ್ಯೋತಿರ್ಲಿಂಗ ಬಹು ಪವಿತ್ರವಾದವುಗಳು. ಈ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದರೆ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ. ಶಿವಲಿಂಗವನ್ನು ಮನೆಯಲ್ಲೂ ಪೂಜಿಸಲಾಗುತ್ತದೆ. ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು? ಹೇಗೆ ಪೂಜಿಸಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.