ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
Daali Dhananjay marriage: ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಇಂದು ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ನಡೆಯಿತು. ಮದುವೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಭಾಗವಹಿಸಿದ್ದರು. ಶಿವಣ್ಣ ಮಂಟಪಕ್ಕೆ ಬಂದೊಡನೆ ಡಾಲಿ ಧನಂಜಯ್ ಮತ್ತು ಧನ್ಯತಾ ಇಬ್ಬರೂ ಸಹ ಶಿವಣ್ಣನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಇಲ್ಲಿದೆ ನೋಡಿ ವಿಡಿಯೋ...
ನಟ ಧನಂಜಯ್, ಡಾಲಿ ಧನಂಜಯ್ ಆಗಲು ಕಾರಣವಾದ ಪ್ರಮುಖರಲ್ಲಿ ಶಿವಣ್ಣ ಸಹ ಒಬ್ಬರು. ಈ ವಿಷಯವನ್ನು ಸ್ವತಃ ಧನಂಜಯ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಶಿವರಾಜ್ ಕುಮಾರ್ ನಟನೆಯ ‘ಟಗರು’ ಸಿನಿಮಾದಲ್ಲಿ ನಟಿಸಿದ ಬಳಿಕವೇ ಧನಂಜಯ್ಗೆ ದೊಡ್ಡ ಹೆಸರು ಸಿಕ್ಕಿದ್ದು, ಬರೀ ಧನಂಜಯ್ ಆಗಿದ್ದವರು ಡಾಲಿ ಧನಂಜಯ್ ಆಗಿದ್ದು. ‘ಟಗರು’ ಸಮಯದಿಂದಲೂ ಶಿವಣ್ಣ ಹಾಗೂ ಧನಂಜಯ್ ನಡುವೆ ಆಪ್ತ ಬಂಧ ಇದೆ. ಇತ್ತೀಚೆಗಷ್ಟೆ ಶಿವಣ್ಣ ಅನಾರೋಗ್ಯದಿಂದ ಗುಣಮುಖರಾಗಿ ಬೆಂಗಳೂರಿಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಆ ವಿಶ್ರಾಂತಿಯ ನಡುವೆಯೂ ಡಾಲಿ ಧನಂಜಯ್ ಮದುವೆಗೆ ಬಂದು ಶುಭ ಕೋರಿ ಹೋಗಿದ್ದಾರೆ ಶಿವಣ್ಣ. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos