Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ

Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ

ವಿವೇಕ ಬಿರಾದಾರ
|

Updated on: Feb 17, 2025 | 7:21 AM

ಸತ್ಯನಾರಾಯಣ ಸ್ವಾಮಿ ವ್ರತವು ಹಿಂದೂ ಧರ್ಮದಲ್ಲಿ ಬಹಳ ಪ್ರಮುಖವಾದ ಪೂಜೆಯಾಗಿದೆ. ಇದನ್ನು ಕಷ್ಟಕಾಲದಲ್ಲಿ ಅಥವಾ ಶುಭ ಕಾರ್ಯಗಳಿಗೆ ಮುನ್ನ ಮಾಡಲಾಗುತ್ತದೆ. ವಿಷ್ಣುವಿನ ಸ್ವರೂಪವಾದ ಸತ್ಯನಾರಾಯಣನ ಆರಾಧನೆಯೇ ಇದರ ಮುಖ್ಯಾಂಶ. ವ್ರತದ ಕಥೆಯನ್ನು ಕೇಳುವುದು ಮುಖ್ಯ, ಏಕೆಂದರೆ ಅದು ನವಗ್ರಹಗಳ ಕಾಟದಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ. ಭಕ್ತಿಯಿಂದ ಮಾಡಿದರೆ ಈ ವ್ರತದ ಫಲ ಹೆಚ್ಚು ಸಿಗುತ್ತದೆ. ಪ್ರಸಾದವನ್ನು ಹಂಚಿಕೊಳ್ಳುವುದರಿಂದಲೂ ಭಗವಂತನ ಅನುಗ್ರಹ ದೊರೆಯುತ್ತದೆ.

ಸತ್ಯನಾರಾಯಣ ಸ್ವಾಮಿ ವ್ರತವು ಹಿಂದೂ ಧರ್ಮದಲ್ಲಿ ಬಹಳ ಪ್ರಮುಖವಾದ ಒಂದು ಪೂಜೆಯಾಗಿದೆ. ಕಷ್ಟಕಾಲಗಳಲ್ಲಿ, ಅಥವಾ ಒಳ್ಳೆಯದಕ್ಕಾಗಿ, ಅನೇಕ ಜನರು ಈ ವ್ರತವನ್ನು ಆಚರಿಸುತ್ತಾರೆ. ಈ ವ್ರತದ ಮಹತ್ವವು ವಿಷ್ಣುವಿನ ಸ್ವರೂಪವಾದ ಸತ್ಯನಾರಾಯಣ ಸ್ವಾಮಿಯ ಆರಾಧನೆಯಲ್ಲಿದೆ. ಅವರು ನವಗ್ರಹಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂದು ನಂಬಲಾಗಿದೆ. ಮದುವೆ, ಗೃಹಪ್ರವೇಶ, ಹುಟ್ಟುಹಬ್ಬ ಮುಂತಾದ ಶುಭ ಕಾರ್ಯಗಳಿಗೂ ಮುನ್ನ ಈ ವ್ರತವನ್ನು ಮಾಡುವುದು ಶುಭಕರ ಎಂದು ಪರಿಗಣಿಸಲಾಗಿದೆ. ಈ ವ್ರತದಲ್ಲಿ ಕಥೆಯನ್ನು ಕೇಳುವುದು ಬಹಳ ಮುಖ್ಯ, ಏಕೆಂದರೆ ಅದನ್ನು ಕೇಳುವವರಿಗೆ ನವಗ್ರಹಗಳ ಕಾಟದಿಂದ ರಕ್ಷಣೆ ದೊರೆಯುತ್ತದೆ ಎಂದು ನಂಬಲಾಗಿದೆ. ಭಕ್ತಿಯಿಂದ ಮಾಡಿದರೆ ಈ ವ್ರತದ ಫಲ ಹೆಚ್ಚು ಸಿಗುತ್ತದೆ. ಪ್ರಸಾದವನ್ನು ಹಂಚಿಕೊಳ್ಳುವುದರಿಂದಲೂ ಭಗವಂತನ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆ ಇದೆ. ಈ ವ್ರತ ಜಾತಿ, ಮತ, ಪಂಥಗಳನ್ನು ಲಕ್ಷಿಸುವುದಿಲ್ಲ ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.