ಶಿವರಾಜ್ ಕುಮಾರ್ ಸಿನಿಮಾ ತಡೆಗೆ ಬಿಜೆಪಿ ಮನವಿ: ಶಿವಣ್ಣ ಪ್ರತಿಕ್ರಿಯಿಸಿದ್ದು ಹೀಗೆ

ಶಿವರಾಜ್ ಕುಮಾರ್ ಸಿನಿಮಾ ತಡೆಗೆ ಬಿಜೆಪಿ ಮನವಿ: ಶಿವಣ್ಣ ಪ್ರತಿಕ್ರಿಯಿಸಿದ್ದು ಹೀಗೆ

ಮಂಜುನಾಥ ಸಿ.
|

Updated on: Mar 26, 2024 | 7:52 PM

Shiva Rajkumar: ಲೋಕಸಭೆ ಚುನಾವಣೆಗೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದು, ಶಿವಣ್ಣ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಬಿಜೆಪಿ ಮುಖಂಡರು, ಶಿವಣ್ಣನ ಸಿನಿಮಾ, ಜಾಹೀರಾತು ತಡೆಯಬೇಕೆಂದು ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.

ಶಿವರಾಜ್ ಕುಮಾರ್ (Shiva Rajkumar) ಪತ್ನಿ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್, ಶಿವಮೊಗ್ಗದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಶಿವರಾಜ್ ಕುಮಾರ್ ಅವರು ಬಹಿರಂಗ ಪ್ರಚಾರಕ್ಕೆ ಪತ್ನಿಯೊಟ್ಟಿಗೆ ಓಡಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಬಿಜೆಪಿ ಮುಖಂಡರು, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಶಿವರಾಜ್ ಕುಮಾರ್ ಅವರ ಪತ್ನಿ ಚುನಾವಣೆ ಕಣದಲ್ಲಿದ್ದು, ಶಿವರಾಜ್ ಕುಮಾರ್ ಅವರ ಪರವಾಗಿ ಸ್ಟಾರ್ ಪ್ರಚಾರಕರಾಗಿರುವ ಕಾರಣ ಅವರ ಸಿನಿಮಾ, ಜಾಹೀರಾತುಗಳು ಪ್ರಸಾರವಾಗದಂತೆ ತಡೆಯಬೇಕೆಂದು ಮನವಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಪತ್ನಿ ಪರವಾಗಿ ಪ್ರಚಾರ ನಡೆಸುತ್ತಿರುವ ಶಿವರಾಜ್ ಕುಮಾರ್ ಈ ಬಗ್ಗೆ ಮಾಧ್ಯಮಗಳ ಬಳಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ