ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
Shiva Rajkumar: ಶಿವರಾಜ್ ಕುಮಾರ್ ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕಾರಣ ತುಸು ಆತಂಕದಲ್ಲಿದ್ದಾರೆ. ಮನೆ ಬಿಟ್ಟು ಒಂದು ತಿಂಗಳು ಇರಬೇಕಾಗಿರುವ ಕಾರಣ ಭಾವುಕವಾಗಿದ್ದಾರೆ. ಇದೆಲ್ಲದರ ನಡುವೆಯೂ ಈ ವಾರ ಸಿನಿಮಾ ಬಿಡುಗಡೆ ಆಗುತ್ತಿರುವ ಸುದೀಪ್ ಹಾಗೂ ಉಪೇಂದ್ರ ಅವರಿಗೆ ಶುಭ ಹಾರೈಸಿದ್ದಾರೆ.
ಶಿವರಾಜ್ ಕುಮಾರ್ ಇಂದು ತುಸು ಭಾವುಕರಾಗಿದ್ದಾರೆ. ಚಿಕಿತ್ಸೆಗಾಗಿ ಅವರು ದೇಶ ಬಿಟ್ಟು ಅಮೆರಿಕಕ್ಕೆ ತೆರಳುತ್ತಿದ್ದಾರೆ. ವೈದ್ಯರ ಭರವಸೆ ಇದ್ದರೂ ಸಹ ತುಸು ಆತಂಕ ಎದೆಯಲ್ಲಿದೆ ಎಂದು ಸ್ವತಃ ಶಿವಣ್ಣ ಹೇಳಿಕೊಂಡಿದ್ದಾರೆ. ಶಿವಣ್ಣ ಚಿಕಿತ್ಸೆಗೆ ತೆರಳುತ್ತಿರುವ ಸುದ್ದಿ ತಿಳಿದು ಹಲವಾರು ಸಂಖ್ಯೆಯಲ್ಲಿ ಅಭಿಮಾನಿಗಳು ಶಿವಣ್ಣನ ಮನೆಯ ಮುಂದೆ ಜಮಾಯಿಸಿದ್ದಾರೆ. ಎಲ್ಲರಿಗೂ ಸಂತೈಸಿ, ನಗು ನಗುತ್ತಲೇ ಶಿವಣ್ಣ ಮಾತನಾಡಿಸಿದ್ದಾರೆ. ಆತಂಕದಲ್ಲಿ ಬಂದ ಅಭಿಮಾನಿಗಳಿಗೆ ಅವರೇ ಧೈರ್ಯ ಹೇಳಿದ್ದಾರೆ. ಸ್ವತಃ ಆತಂಕದಲ್ಲಿದ್ದರೂ, ಅನಾರೋಗ್ಯದಲ್ಲಿದ್ದರೂ ಸಹ ತಮ್ಮ ಸಹನಟರು, ಗೆಳೆಯರೂ ಆದ ಸುದೀಪ್ ಹಾಗೂ ಉಪೇಂದ್ರ ಅವರಿಗೆ ಶುಭ ಹಾರೈಸುವುದನ್ನು ಶಿವಣ್ಣ ಮರೆತಿಲ್ಲ. ಸುದೀಪ್ ಅವರ ‘ಮ್ಯಾಕ್ಸ್’ ಹಾಗೂ ಉಪೇಂದ್ರ ಅವರ ‘ಯುಐ’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಎರಡೂ ಸಿನಿಮಾಕ್ಕೆ ಶಿವಣ್ಣ ಶುಭ ಹಾರೈಸಿದ್ದಾರೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯ ಸಹ ತಿಳಿಸಿದ್ದಾರೆ. ವಿಡಿಯೋ ನೋಡಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ