Karnataka Assembly Session: ಎಸ್ ಎಂ ಕೃಷ್ಣ ಅವರನ್ನು ರಾಜ್ಯಸಭಾ ಸದಸ್ಯ ಮಾಡಿದ ಸಂದರ್ಭ ಸದನದಲ್ಲಿ ವಿವರಿಸಿದ ಶಿವಕುಮಾರ್
Karnataka Assembly Session: ಮತ್ತೊಂದು ಸ್ವಾರಸ್ಯಕರ ಸಂದರ್ಭವನ್ನು ವಿವರಿಸಿದ ಶಿವಕುಮಾರ್, 1999ರಲ್ಲಿ ಕೃಷ್ಣ ಅವರು ಮುಖ್ಯಮಂತ್ರಿಯಾದಾಗ ಅವರ ಸಂಭಾವ್ಯ ಮಂತ್ರಿಮಂಡಲದ ಸದಸ್ಯರ ಹೆಸರು ಮತ್ತು ಖಾತೆಯ ಪಟ್ಟಿಯನ್ನು ಇವರು ಮತ್ತು ಟಿಬಿ ಜಯಚಂದ್ರ ತಯಾರು ಮಾಡಿ ಅನುಮೋದನೆಗೆಂದು ಹೈಕಮಾಂಡ್ಗೆ ಕಳಿಸಿದ ಮೇಲೆ ಅಲ್ಲಿಂದ ವಾಪಸ್ಸದ ಲಿಸ್ಟ್ ನಲ್ಲಿ ಇವರಿಬ್ಬರ ಹೆಸರು ಇರಲಿಲ್ಲವಂತೆ!
ಬೆಳಗಾವಿ: ಸದನದಲ್ಲಿ ಇಂದು ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಮತ್ತು ಎಸ್ ಎಂ ಕೃಷ್ಣ ನಡುವಿನ ಬಾಂಧವ್ಯ ಮತ್ತು ಅವರನ್ನು ರಾಜ್ಯಸಭಾ ಸದಸ್ಯನನ್ನಾಗಿ ಮಾಡಿದ ಸಂದರ್ಭವನ್ನು ಮೆಲುಕು ಹಾಕಿದರು. ಒಮ್ಮೆ ಇವರು ರೆಬೆಲ್ ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದಾಗ ಅಗಿನ ಪ್ರಧಾನ ಮಂತ್ರಿಯಾಗಿದ್ದ ನರಸಿಂಹರಾವ್ ಅವರನ್ನು ಭೇಟಿಯಾಗುವ ಪ್ರಸಂಗ ಎದುರಾಗಿತ್ತು. ನರಸಿಂಹರಾಯರ ಜೊತೆ ಇಂಗ್ಲಿಷ್ ಮಾತಾಡುತ್ತಿದ್ದ ಶಿವಕುಮಾರ್ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಬೇಕೆಂದು ಹೇಳಿದಾಗ ಅದು ಸಾಧ್ಯವಿಲ್ಲ, ಕೃಷ್ಣ ಅವರನ್ನು ರಾಜ್ಯಸಭಾ ಸದಸ್ಯರರನ್ನಾಗಿ ಮಾಡೋದಾದರೆ ಮಾತ್ರ ವೋಟು ಮಾಡೋದಾಗಿ ಹೇಳಿ ಕೃಷ್ಣ ಅವರಿಗೆ ಮೇಲ್ಮನೆ ಸ್ಥಾನ ಗಿಟ್ಟಿಸಿದ್ದರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತಾವೊಬ್ಬ ಡಿಸಿಎಂ ಎನ್ನುವುದನ್ನೇ ಮರೆತು ಗುರುವಿನ ಋಣ ತೀರಿಸಿದ ಡಿಕೆ ಶಿವಕುಮಾರ್

ಯತ್ನಾಳ್ ಕಾಂಗ್ರೆಸ್ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ

VIDEO: ಕೆಎಲ್ ರಾಹುಲ್ ಮಿಮಿಕ್ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ

ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ

ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
