ಮುಸಲ್ಮಾನರು ತನ್ನ ಅಣ್ಣತಮ್ಮಂದಿರು ಅಂತ ಶಿವಕುಮಾರ್ ಯಾವತ್ತೋ ಘೋಷಣೆ ಮಾಡಿದ್ದಾರೆ: ಬಸನಗೌಡ ಯತ್ನಾಳ್

|

Updated on: Apr 22, 2024 | 2:47 PM

ಕೆಲ ಸಚಿವರು ನೇಹಾಳ ಮನೆಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು ಬಿಟ್ಟರೆ, ಈ ಹೇಯ ಕೃತ್ಯವನ್ನು ಖಂಡಿಸಿಲ್ಲ ಮತ್ತು ಕೊಲೆಗಡುಕನನ್ನು ಗಲ್ಲಿಗೇರಿಸುವ ಶಿಕ್ಷೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಅಂತ ಹೇಳಿಲ್ಲ ಎಂದು ಹೇಳಿದರು. ಅನುಕಂಪದ ಮಾತುಗಳನ್ನಾಡುತ್ತಾ ಮೊಸಳೆ ಕಣ್ಣೀರು ಸುರಿಸುತ್ತಿರುವ ಸರ್ಕಾರದ ವಿರುದ್ಧ ರಾಜ್ಯದೆಲ್ಲೆಡೆ ಅಸಮಾಧಾನ ಭುಗಿಲೆದ್ದಿದೆ, ಈ ಪ್ರಕರಣದ ತನಿಖೆ ಸಿಬಿಐನಿಂದ ಮಾಡಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ ಎಂದು ಯತ್ನಾಳ್ ಹೇಳಿದರು.

ಕಲಬುರಗಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ನೇಹಾ ಕೊಲೆ ಪ್ರಕರಣವನ್ನು (Neha murder case) ಸಿದ್ದರಾಮಯ್ಯ ಸರ್ಕಾರ (Siddaramaiah government) ಬಹಳ ಹಗುರವಾಗಿ ಪರಿಗಣಿಸಿದೆ, ಕೆಲ ಸಚಿವರು ನೇಹಾಳ ಮನೆಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು ಬಿಟ್ಟರೆ, ಈ ಹೇಯ ಕೃತ್ಯವನ್ನು ಖಂಡಿಸಿಲ್ಲ ಮತ್ತು ಕೊಲೆಗಡುಕನನ್ನು ಗಲ್ಲಿಗೇರಿಸುವ ಶಿಕ್ಷೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಅಂತ ಹೇಳಿಲ್ಲ ಎಂದು ಹೇಳಿದರು. ಅನುಕಂಪದ ಮಾತುಗಳನ್ನಾಡುತ್ತಾ ಮೊಸಳೆ ಕಣ್ಣೀರು ಸುರಿಸುತ್ತಿರುವ ಸರ್ಕಾರದ ವಿರುದ್ಧ ರಾಜ್ಯದೆಲ್ಲೆಡೆ ಅಸಮಾಧಾನ ಭುಗಿಲೆದ್ದಿದೆ, ಈ ಪ್ರಕರಣದ ತನಿಖೆ ಸಿಬಿಐನಿಂದ ಮಾಡಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ ಎಂದು ಯತ್ನಾಳ್ ಹೇಳಿದರು.

ಡಿಕೆ ಶಿವಕುಮಾರ್ ತಮ್ಮ ಹೇಳಿಕೆಯೊಂದರಲ್ಲಿ ಬಿಜೆಪಿಯು ಮುಸ್ಲಿಂ ಸಮುದಾಯಕ್ಕೆ ಕಿರುಕುಳ ನೀಡುತ್ತಿದೆ, ಎಂದು ಹೇಳಿರುವುದನ್ನು ಯತ್ನಾಳ್ ಗಮನಕ್ಕೆ ತಂದಾಗ, ಮುಸಲ್ಮಾನರು ತಮ್ಮ ಸಹೋದರರು ಅಂತ ಅವರು ಘೋಷಣೆಯನ್ನೇ ಮಾಡಿದ್ದಾರೆ. ರಾಮನಗರದಲ್ಲಿ ಮುಸ್ಲಿಂ ಮತಾಂಧನೊಬ್ಬ ರಾಮಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದರೂ ಶಿವಕುಮಾರ್ ಅವನ ವಿರುದ್ಧ ಬಾಯಿಬಿಡಲಿಲ್ಲ, ತಾವು ಹಿಂದೂ ವಿರೋಧಿಗಳು ಅಂತ ಅವರು ಯಾವತ್ತೋ ಸಾಬೀತು ಮಾಡಿದ್ದಾರೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೆ ನಾನೇ ಮುಖ್ಯಮಂತ್ರಿ: ಬಸನಗೌಡ ಪಾಟೀಲ್ ಯತ್ನಾಳ್