ಶಿವಕುಮಾರ್ಗೆ ಸಿಎಂ ಹುದ್ದೆ ಸುಮ್ಮನೆ ಸಿಗಲ್ಲ ಅದನ್ನವರು ಒದ್ದೇ ಪಡೆಯಬೇಕಾದ ಅನಿವಾರ್ಯತೆ ಇದೆ: ಸುನೀಲ ಕುಮಾರ್, ಶಾಸಕ
ಸಿಎಂ ಯಾರಾಗಬೇಕು, ಅಧಿಕಾರ ಯಾರಿಗೆ ಸಿಗಬೇಕು ಅನ್ನೋದನ್ನು ಕಾಂಗ್ರೆಸ್ ತೀರ್ಮಾನ ಮಾಡಬೇಕು ಅಂತಲೂ ಸುನೀಲ ಕುಮಾರ್ ಹೇಳುತ್ತಾರೆ! ಕಳೆದ ಎರಡು ವರ್ಷಗಳಿಂದ ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿಲ್ಲ, ಮಳೆ ಚೆನ್ನಾಗಿ ಅದರೂ ಕ್ಷೇತ್ರದಲ್ಲಿ ಅಭಿವೃದ್ಧಿಯ ಬರ, ಹಾಗಾಗಿ, ಮುಖ್ಯಮಂತ್ರಿ ಯಾರೇ ಆದರೂ ಅನುದಾನ ಬಿಡುಗಡೆಗಾಗಿ ತಾವು ಹೋರಾಡುವುದು ನಿಶ್ಚಿತ ಎಂದು ಶಾಸಕ ಹೇಳುತ್ತಾರೆ.
ಉಡುಪಿ: ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಸುಲಭವಾಗಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಹುದ್ದೆಯನ್ನು ಬಿಟ್ಟು ಕೊಡೋದಿಲ್ಲ, ಹಾಗಾಗಿ ಹುದ್ದೆಯನ್ನು ಒದ್ದು ಕಿತ್ತುಕೊಳ್ಳಬೇಕಾದ ಅನಿವಾರ್ಯತೆ ಶಿವಕುಮಾರ್ ಅವರಿಗಿದೆ ಎಂದು ಬಿಜೆಪಿ ಶಾಸಕ ಸುನೀಲ ಕುಮಾರ್ ಹೇಳಿದರು. ಹಿಂದೆ ಎಸ್ ಎಂ ಕೃಷ್ಣ ಅವರ ಸಚಿವ ಸಂಪುಟದಲ್ಲಿ ಅವರು ಒದ್ದು ಸಚಿವ ಸ್ಥಾನ ಪಡೆದಿದ್ದರು ಈಗಲೂ ಹಾಗೆ ಮಾಡಲೇಬೇಕಾದ ಅವಶ್ಯತಕೆಯಿದೆ ಎಂದು ಶಾಸಕ ಹೇಳಿದರು. ಇದೊಳ್ಳೇ ಕತೆಯಾಯ್ತು ಮಾರಾಯ್ರೇ, ಸಿಎಂ ಕುರ್ಚಿಯನ್ನು ಶಿವಕುಮಾರ್ ಒದ್ದು ಪಡೆಯುತ್ತಾರೋ ಅಥವಾ ಬೇರೆ ರೀತಿಯಿಂದ ಪಡೆಯುತ್ತಾರೋ ಅದು ಅವರ ತಲೆಬಿಸಿ. ಸುನೀಲ ಕುಮಾರ್ ಮತ್ತು ಅರ್ ಅಶೋಕ ಯಾಕೆ ಈ ವಿಷಯದಲ್ಲಿ ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಅಂತ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇರಳ ಸಿಎಂ ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು: ಬಿಜೆಪಿ ಶಾಸಕ ಸುನೀಲ್ ಕುಮಾರ್ ಕಿಡಿ
Published on: Jan 11, 2025 07:09 PM