ಜನಸ್ಪಂದನಾ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಿದ ಮಹಿಳೆ ಜಮೀರ್ ನಿಂದ ತೊಂದರೆ ಅಂದಾಗ ಶಿವಕುಮಾರ್ ಹುಬ್ಬೇರಿಸಿದರು!

ರಸ್ತೆಯ ಸಮಸ್ಯೆ ಬಹಳ ವರ್ಷಗಳಿಂದ ಇದೆ ಅಂತ ಹೇಳುವ ಮಹಿಳೆ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕನಿಷ್ಠ ಹತ್ತು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದಾಗ ಹುಬ್ಬೇರಿಸುವ ಸರದಿ ಶಿವಕುಮಾರ್ ಎಡಪಕ್ಕ ಕುಳಿತಿದ್ದ ಯಲಹಂಕದ ಬಿಜೆಪಿ ಶಾಸಕ ಎಸ್ ಅರ್ ವಿಶ್ವನಾಥ್ ಅವರದ್ದಾಗುತ್ತದೆ!

ಜನಸ್ಪಂದನಾ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಿದ ಮಹಿಳೆ ಜಮೀರ್ ನಿಂದ ತೊಂದರೆ ಅಂದಾಗ ಶಿವಕುಮಾರ್ ಹುಬ್ಬೇರಿಸಿದರು!
|

Updated on: Jan 05, 2024 | 7:24 PM

ಬೆಂಗಳೂರು: ಯಲಹಂಕ, ಬ್ಯಾಟರಾಯನಪುರ ಮತ್ತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ (Assembly constituencies) ಇಂದು ಮೊದಲ ಹಂತದ ಜನಸ್ಪಂದನಾ ಕಾರ್ಯಕ್ರಮ (Janaspandana programme) ನಡೆಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಹಿಳೆಯೊಬ್ಬರ ದೂರು ಆಲಿಸುವಾಗ ಹುಬ್ಬೇರಿಸುವಂಥ ಸಂದರ್ಭ ಸೃಷ್ಟಿಯಾಯಿತು. ಮಹಿಳೆ ಯಾವ ವಿಧಾನಸಭಾ ಕ್ಷೇತ್ರದವರು ಅಂತ ಗೊತ್ತಾಗಲಿಲ್ಲ ಅದರೆ ಅವರು ತಮ್ಮ ಏರಿಯಾದಲ್ಲಿ ಬಹಳ ವರ್ಷಗಳಿಂದ ರಸ್ತೆಯ ಸಮಸ್ಯೆಯನ್ನು ಹೇಳಿಕೊಂಡರು. ಅವರು ಹೇಳುವ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಹಾಳು ಮಾಡಿರುವುದರಿಂದ ವಾಹನಗಳ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ, ಅಲ್ಲೆಲ್ಲ ಶಾಲೆಗಳಿರುವುದರಿಂದ ಮಕ್ಕಳ ಶಾಲಾಬಸ್ ಗಳಿಗೆ ಸಮಸ್ಯೆಯಾಗುತ್ತಿದೆ, ಗರ್ಭಿಣಿ ಮಹಿಳೆಯರು ಓಡಾಡಲಾಗುತ್ತಿಲ್ಲ, ಅಂಬ್ಯುಲೆನ್ಸ್ ಆ ರಸ್ತೆಗೆ ಬರೋದು ಸಾಧ್ಯವೇ ಇಲ್ಲ ಎಂದು ಹೇಳುವ ಮಹಿಳೆ, ಸರ್ ನಿಮ್ಮ ಮೇಲೆ ಬಹಲ ನಿರೀಕ್ಷೆ ಇಟ್ಟುಕೊಂಡಿದ್ದೇವೆ, ದಯವಿಟ್ಟು ರಸ್ತೆ ಸರಿಮಾಡಿಸಿಕೊಡಿ ಅನ್ನುತ್ತಾರೆ. ರಸ್ತೆಯನ್ನು ಹಾಳು ಮಾಡಿದ್ದು ಯಾರು ಎಂದು ಶಿವಕುಮಾರ್ ಕೇಳಿದಾಗ ಮಹಿಳೆ ಯಾರೋ ಖಾನ್ ಅಂತ ಹೇಳಿ, ಒಂದೆರಡು ಕ್ಷಣಗಳ ಬಳಿಕ ಜಮೀರ್ ಅನ್ನುತ್ತಾರೆ. ಜಮೀರ್ ಅನ್ನುತ್ತಲೇ ಶಿವಕುಮಾರ್ ಹುಬ್ಬೇರಿಸಿ ಮಹಿಳೆ ಕಡೆ ನೋಡುತ್ತಾರೆ. ಅಲ್ಲಿದ್ದವರಲ್ಲಿ ಯಾರೋ ಒಬ್ಬರು ‘ಲೋಕಲ್ ಜಮೀರ್’ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us