ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ತುಂಬಿ ತುಳುಕಿದ ತುಂಗಾ ಜಲಾಶಯ, ನೀರಿನ ಭೋರ್ಗರೆತ ನೋಡಿ

Updated By: ರಮೇಶ್ ಬಿ. ಜವಳಗೇರಾ

Updated on: May 26, 2025 | 3:50 PM

ಮುಂಗಾರುಪೂರ್ವ ಮಳೆಗೆ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ತುಂಗಾ ತುಂಬಿ ತುಳುಕುತ್ತಿದ್ದು, ಜಲಾಶಯದಿಂದ 10 ಗೇಟ್ ಗಳ‌ ಮೂಲಕ 18,550 ಕ್ಯೂಸೆಕ್ ನೀರು ಹೊರಗೆ ಬಿಡುಗಡೆ ಮಾಡಲಾಗಿದೆ.ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದ ತುಂಗಾ ನದಿ ಫುಲ್ ಆಗಿದ್ದು, ಒಳ ಹರಿವಿನಷ್ಟೇ ನೀರನ್ನು ಹೊರಗೆ ನದಿಗೆ ಬಿಡಲಾಗಿದೆ.

ಶಿವಮೊಗ್ಗ, (ಮೇ 26): ಮುಂಗಾರುಪೂರ್ವ ಮಳೆಗೆ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ತುಂಗಾ ತುಂಬಿ ತುಳುಕುತ್ತಿದ್ದು, ಜಲಾಶಯದಿಂದ 10 ಗೇಟ್ ಗಳ‌ ಮೂಲಕ 18,550 ಕ್ಯೂಸೆಕ್ ನೀರು ಹೊರಗೆ ಬಿಡುಗಡೆ ಮಾಡಲಾಗಿದೆ.ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದ ತುಂಗಾ ನದಿ ಫುಲ್ ಆಗಿದ್ದು, ಒಳ ಹರಿವಿನಷ್ಟೇ ನೀರನ್ನು ಹೊರಗೆ ನದಿಗೆ ಬಿಡಲಾಗಿದೆ.ಇನ್ನು ಈ ನೀರು ನೇರವಾಗಿ ತುಂಗಾಭದ್ರಾ ಜಲಾಶಯಕ್ಕೆ ಸೇರಲಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿ‌ ಇರುವ ಜಲಾಶಯ 588.24 ಮೀಟರ್ ಎತ್ತರ ಇದ್ದು, 3.24 ಟಿಎಂಸಿ ಸಾಮರ್ಥ್ಯ ಹೊಂದಿದೆ.