ಯತ್ನಾಳ್ ಸವಾಲನ್ನು ಶಿವಾನಂದ ಸ್ವೀಕರಿಸಿದ್ದಾರೆ, ಈಗ ವಿಜಯಪುರ ಶಾಸಕನ ಸರದಿ: ಜಮೀರ್ ಅಹ್ಮದ್, ಸಚಿವ

Updated on: May 03, 2025 | 11:37 AM

ಮಾತೆತ್ತಿದರೆ ಬೇರಯವರಿಗೆ ಸವಾಲು ಹಾಕುತ್ತಿದ್ದ, ಬಯ್ಯುತ್ತಿದ್ದ ಬಸನಗೌಡ ಯತ್ನಾಳ್ ನಿನ್ನೆಯಿಂದ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ ಎಂದು ಜಮೀರ್ ಅಹ್ಮದ್ ಮಾಧ್ಯಮದವರನ್ನು ಪ್ರಶ್ನಿಸಿದರು. ಯತ್ನಾಳ್ ಅವರು ಸವಾಲು ಎಸೆದಿರುವ ಕಾರಣಕ್ಕೆ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಮತ್ತು ವಿಜಯಪುರದಿಂದ ಸ್ಪರ್ಧಿಸಲು ತಯಾರಾಗಿದ್ದೇನೆ, ಅವರು ರಾಜೀನಾಮೆ ಸಲ್ಲಿಸಿ ಚುನಾವಣೆಗೆ ತಯಾರಾಗಲಿ ಎಂದು ಶಿವಾನಂದ ಹೇಳಿದ್ದಾರೆ ಎಂದು ಜಮೀರ್ ಹೇಳಿದರು.

ವಿಜಯನಗರ, ಮೇ 3: ಶಿವಾನಂದ ಪಾಟೀಲ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇಬ್ಬರೂ ವಿಜಯಪುರ ಜಿಲ್ಲೆಯವರು, ಯತ್ನಾಳ್ ಅವರು ಪದೇಪದೆ ಶಿವಾನಂದ್ ಪಾಟೀಲರನ್ನು ಕೆಣಕತ್ತಿದ್ದರು, ಧಮ್ ಇದ್ರೆ, ತಾಕತ್ತಿದ್ರೆ ರಾಜೀನಾಮೆ ಸಲ್ಲಿಸಿ ವಿಜಯಪುರದಿಂದ ಸ್ಪರ್ಧಿಸಲಿ ಅಂತ ಸವಾಲೆಸೆದಿದ್ದರು, ಅವರ ಸವಾಲನ್ನು ಸ್ವೀಕರಿಸಿ ಶಿವಾನಂದ ಪಾಟೀಲ್ ರಾಜೀನಾಮೆ ಸಲ್ಲಿಸಿ ವಿಜಯಪುರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ ಎಂದು ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಹೊಸಪೇಟೆಯಲ್ಲಿ ಹೇಳಿದರು. ಶಿವಾನಂದ್ ಅವರ ರಾಜೀನಾಮೆ ಪತ್ರದಲ್ಲಿ ಷರತ್ತುಗಳಿವೆ, ಅದರೆ ರಾಜೀನಾಮೆ ಸಲ್ಲಿಸಿ ತಾವೇನು ಅನ್ನೋದನ್ನು ಸಾಬೀತು ಮಾಡಿದ್ದಾರೆ, ಈಗ ಯತ್ನಾಳ್ ಅವರ ಸರದಿ ಎಂದು ಜಮೀರ್ ಹೇಳಿದರು.

ಇದನ್ನೂ ಓದಿ ಶಿವಾನಂದ ಪಾಟೀಲ್ ರಾಜೀನಾಮೆ ಬೆನ್ನಲ್ಲೇ ಯತ್ನಾಳ್ ಯುಟರ್ನ್​, ಸ್ಪೀಕರ್​ ಹೇಳಿದ್ದೇನು?

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ