‘ಒಬ್ಬೊಬ್ಬರೇ ಇಂಡಸ್ಟ್ರಿಯನ್ನು ಬಿಟ್ಟು ಹೋಗುತ್ತಿರುವುದನ್ನು ನೋಡಿದ್ರೆ ಬೇಸರವಾಗುತ್ತದೆ’; ಶಿವರಾಜ್​ಕುಮಾರ್​

| Updated By: ರಾಜೇಶ್ ದುಗ್ಗುಮನೆ

Updated on: Feb 06, 2022 | 7:02 PM

ಅವರ ಧ್ವನಿಯನ್ನು ಮರೆಯೋಕೆ ಯಾರಿಂದಲೂ ಸಾಧ್ಯವಿಲ್ಲ. ಅವರನ್ನು ಕಳೆದುಕೊಂಡಿದ್ದು ಬೇಸರ ತಂದಿದೆ. ಇಂಡಸ್ಟ್ರಿಯನ್ನು ಒಬ್ಬೊಬ್ಬರೇ ಬಿಟ್ಟು ಹೋಗುತ್ತಿರುವುದನ್ನು ನೋಡಿದ್ರೆ ಬೇಸರವಾಗುತ್ತೆ ಎಂದಿದ್ದಾರೆ ಶಿವರಾಜ್​ಕುಮಾರ್​.

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರ ನಿಧನ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರು ಇಂದು (ಫೆಬ್ರವರಿ 6) ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿದೆ. ಚಿತ್ರರಂಗ ಸೇರಿ ಬಹುತೇಕ ಎಲ್ಲಾ ಕ್ಷೇತ್ರದವರು ಲತಾ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಸ್ಯಾಂಡಲ್​ವುಡ್​ನ ದಿಗ್ಗಜರು ಲತಾ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.  ನಟ ಶಿವರಾಜ್​ಕುಮಾರ್​ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಲತಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಟಿವಿ9 ಕನ್ನಡದ ಜತೆ ಮಾತನಾಡಿರುವ ಶಿವರಾಜ್​ಕುಮಾರ್ (Shivaraj Kumar), ‘ಅವರ ಧ್ವನಿಯನ್ನು ಮರೆಯೋಕೆ ಯಾರಿಂದಲೂ ಸಾಧ್ಯವಿಲ್ಲ. ಅವರನ್ನು ಕಳೆದುಕೊಂಡಿದ್ದು ಬೇಸರ ತಂದಿದೆ. ಇಂಡಸ್ಟ್ರಿಯನ್ನು ಒಬ್ಬೊಬ್ಬರೇ ಬಿಟ್ಟು ಹೋಗುತ್ತಿರುವುದನ್ನು ನೋಡಿದ್ರೆ ಬೇಸರವಾಗುತ್ತೆ’ ಎಂದಿದ್ದಾರೆ​.

ಇದನ್ನೂ ಓದಿ: Lata Mangeshkar: ಲತಾ ಮಂಗೇಶ್ಕರ್ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಿಂದ ಕಾಲೇಜು ನಿರ್ಮಾಣ ಮಾಡಲಾಗಿತ್ತು

‘ದುಃಖವನ್ನು ಮರೆಮಾಚುವ ನಗು’; ಆಶಾ ಭೋಸ್ಲೆ ಭೇಟಿ ಮಾಡಿ ಸಾಂತ್ವನ ಹೇಳಿದ ಅನುಪಮ್​ ಖೇರ್ 

 

Follow us on