Lata Mangeshkar: ಲತಾ ಮಂಗೇಶ್ಕರ್ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಿಂದ ಕಾಲೇಜು ನಿರ್ಮಾಣ ಮಾಡಲಾಗಿತ್ತು

1980ರಲ್ಲಿ ದೀನಾನಾಥ್ ಮಂಗೇಶ್ಕರ್ ಮಹಾವಿದ್ಯಾಲಯ ಆರಂಭ ಆಗಿತ್ತು. ಗಾನ ಕೋಗಿಲೆ ಲತಾ ಮಂಗೇಶ್ಕರ್ ಮಹಾವಿದ್ಯಾಲಯ ಆರಂಭಿಸಿದ್ದರು. ಇದೀಗ ಲತಾ ನಿಧನದ ಹಿನ್ನೆಲೆ ದೀನಾನಾಥ್ ಮಹಾವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ.

Lata Mangeshkar: ಲತಾ ಮಂಗೇಶ್ಕರ್ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಿಂದ ಕಾಲೇಜು ನಿರ್ಮಾಣ ಮಾಡಲಾಗಿತ್ತು
ಲತಾ ಮಂಗೇಶ್ಕರ್
Follow us
TV9 Web
| Updated By: ganapathi bhat

Updated on:Feb 06, 2022 | 5:15 PM

ಬೀದರ್: ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ (92) ಇಂದು (ಫೆಬ್ರವರಿ 6) ಬೆಳಗ್ಗೆ ನಿಧನ ಹೊಂದಿದ್ದಾರೆ. ಭಾರತದಾದ್ಯಂತ ಲತಾ ಮಂಗೇಶ್ಕರ್ ನಿಧನದಿಂದ ಶೋಕ ವಾತಾವರಣ ತುಂಬಿದೆ. ಗಣ್ಯರು, ಜನಸಾಮಾನ್ಯರು ಖ್ಯಾತ ಗಾಯಕಿಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇತ್ತ ಲತಾ ತಂದೆ ಹೆಸರಿನ ಮಹಾವಿದ್ಯಾಲಯದಲ್ಲಿ ಕೂಡ ಶೋಕ ಮಡುಗಟ್ಟಿದೆ. ಲತಾ ಮಂಗೇಶ್ಕರ್ ತಂದೆ ಹೆಸರಿನ ಮಾಸ್ಟರ್​ ದೀನಾನಾಥ್ ಮಂಗೇಶ್ಕರ್ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಮಹಾರಾಷ್ಟ್ರದ ಲಾತೂರ್​ ಜಿಲ್ಲೆ ನಿಲಂಗಾ ತಾಲೂಕಿನ ದೀನಾನಾಥ್ ಕಾಲೇಜಿನಲ್ಲಿ ಶೋಕಾಚರಣೆ ಮಾಡಲಾಗಿದೆ.

1972, 1976 ರಲ್ಲಿ ಲತಾ ಮಂಗೇಶ್ಕರ್ ಇಲ್ಲಿ ಎರಡು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಊರಿನ ಜನರ ಮನವಿ ಮೇರೆಗೆ ಗ್ರಾಮಕ್ಕೆ ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಬಳಿಕ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಿಂದ ಕಾಲೇಜು ನಿರ್ಮಾಣ ಮಾಡಲಾಗಿತ್ತು. 1980ರಲ್ಲಿ ದೀನಾನಾಥ್ ಮಂಗೇಶ್ಕರ್ ಮಹಾವಿದ್ಯಾಲಯ ಆರಂಭ ಆಗಿತ್ತು. ಗಾನ ಕೋಗಿಲೆ ಲತಾ ಮಂಗೇಶ್ಕರ್ ಮಹಾವಿದ್ಯಾಲಯ ಆರಂಭಿಸಿದ್ದರು. ಇದೀಗ ಲತಾ ನಿಧನದ ಹಿನ್ನೆಲೆ ದೀನಾನಾಥ್ ಮಹಾವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ.

ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್(92) ನಿಧನವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ದೀನಾನಾಥ್ ಮಂಗೇಶ್ಕರ್ ಕಾಲೇಜು ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದ ಲಾತೂರ್​ ಜಿಲ್ಲೆ ನಿಲಂಗಾ ತಾಲೂಕಿನ ಶಹಜಾನಿ ಔರಾದ್​ ಗ್ರಾಮದಲ್ಲಿರುವ ದೀನಾನಾಥ್ ಕಾಲೇಜಿನ ಅಧ್ಯಕ್ಷರು ಗಾಯಕಿಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಕೋಗಿಲೆಗಳ ಸಾಮ್ರಾಜ್ಯದ ಮಹಾರಾಣಿ ಲತಾ ಮಂಗೇಶ್ಕರ್

ಲತಾ ಮಂಗೇಶ್ಕರ್ ನಿಧನಕ್ಕೆ ಚಿತ್ರಸಾಹಿತಿ ಕೆ.ಕಲ್ಯಾಣ್ ಸಂತಾಪ ವ್ಯಕ್ತಪಡಿಸಿದ್ದಾರೆ. ಕೋಗಿಲೆಗಳ ಸಾಮ್ರಾಜ್ಯದ ಮಹಾರಾಣಿ ಲತಾ ಮಂಗೇಶ್ಕರ್. ಲತಾ ಮಂಗೇಶ್ಕರ್ ಹಾಡುಗಳಿಂದ ಕಾಯಿಲೆ ವಾಸಿಯಾಗುತ್ತವೆ. ದೈವಿಕ ಕಂಟ, ಮಹಾನ್ ಸರಸ್ವತಿ ಲತಾ ಮಂಗೇಶ್ಕರ್. ಲತಾ ಮಂಗೇಶ್ಕರ್ ನಿಧನ ಸಂಗೀತ ಲೋಕಕ್ಕಾದ ದೊಡ್ಡ ನಷ್ಟ. ಕನ್ನಡದ ನಾಡಗೀತೆ ಹಾಡಿಸಬೇಕು ಅನ್ನೋ ಪ್ರಯತ್ನ ಇತ್ತು. ಇದು ಆಸೆಯಾಗಿಯೇ ಉಳಿದುಕೊಂಡಿತು ಎಂದು ಬೆಳಗಾವಿಯಲ್ಲಿ ಹೆಸರಾಂತ ಚಿತ್ರಸಾಹಿತಿ ಕೆ. ಕಲ್ಯಾಣ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Lata Mangeshkar: ಲತಾ ಮಂಗೇಶ್ಕರ್ ನಿಧನ ಹಿನ್ನೆಲೆ ಕರ್ನಾಟಕ ಸರ್ಕಾರದಿಂದ 2 ದಿನಗಳ ಕಾಲ ಶೋಕಾಚರಣೆ

ಇದನ್ನೂ ಓದಿ: Lata Mangeshkar; ‘ನನ್ನಿಂದ ತಪ್ಪಾಗಿದೆ ಕ್ಷಮಿಸಿ ಲತಾಜೀ, ನಿಮ್ಮನ್ನು ಬೆಂಗಳೂರಿಗೆ ಕರೆಸಿಕೊಳ್ಳುವ ಕನಸು ಹಾಗೇ ಉಳಿಯಿತು’

Published On - 4:44 pm, Sun, 6 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ