‘ವೇದ’ ಸಿನಿಮಾ ಮಾಡುವಾಗ ನನ್ನಲ್ಲಿ ಅಪ್ಪುನ ಹುಡಕೋ ಪ್ರಯತ್ನ ಮಾಡಿದ್ದೇನೆ; ಶಿವರಾಜ್​ಕುಮಾರ್

Edited By:

Updated on: Mar 07, 2022 | 4:30 PM

‘ಜೇಮ್ಸ್​’ ಸಿನಿಮಾ ಸುದ್ದಿಗೋಷ್ಠಿ ಮಾರ್ಚ್​ 6ರಂದು ನಡೆದಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಿವರಾಜ್​ಕುಮಾರ್ (Shivaraj Kumar )ಆಗಮಿಸಿದ್ದರು. ವೇದಿಕೆ ಮೇಲೆ ಅವರು ಪುನೀತ್​ ಬಗ್ಗೆ ಮಾತನಾಡುವಾಗ ತುಂಬಾನೇ ಭಾವುಕರಾದರು.

ಪುನೀತ್​ ರಾಜ್​ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್​’ ಸಿನಿಮಾ (James Movie) ಮಾರ್ಚ್​ 17ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಸುದ್ದಿಗೋಷ್ಠಿ ಮಾರ್ಚ್​ 6ರಂದು ನಡೆದಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಿವರಾಜ್​ಕುಮಾರ್ (Shivaraj Kumar )ಆಗಮಿಸಿದ್ದರು. ವೇದಿಕೆ ಮೇಲೆ ಅವರು ಪುನೀತ್​ ಬಗ್ಗೆ ಮಾತನಾಡುವಾಗ ತುಂಬಾನೇ ಭಾವುಕರಾದರು. ‘ಅಪ್ಪು ಯಾವಾಗಲೂ ಬದುಕಿರುತ್ತಾನೆ. ಅವನು ಅನೇಕರಿಗೆ ಸ್ಫೂರ್ತಿ. ಅವನನ್ನು ಹಾಗೆಯೇ ಬಿಡೋಕೆ ನನಗೆ ಮನಸ್ಸಿಲ್ಲ. ‘ವೇದ’ ಸಿನಿಮಾ ಮಾಡುವಾಗ ನನ್ನಲ್ಲಿ ಅಪ್ಪುನ ಹುಡುಕೋ ಪ್ರಯತ್ನ ಮಾಡಿದ್ದೇನೆ. ನನ್ನ ರೂಪದಲ್ಲಿ ಅವನನ್ನು ತೋರಿಸೋಕೆ ಆಗುತ್ತಾ ಎಂದು ಪ್ರಯತ್ನಿಸುತ್ತಿರುತ್ತೇನೆ’ ಎಂದರು ಶಿವಣ್ಣ. ‘ವೇದ’ ಸಿನಿಮಾಗೆ ಎ. ಹರ್ಷ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಹರ್ಷ ಹಾಗೂ ಶಿವರಾಜ್​ಕುಮಾರ್ ನಾಲ್ಕನೇ ಬಾರಿಗೆ ಒಂದಾಗಿದ್ದಾರೆ. ಈ ಚಿತ್ರದ ಶೂಟಿಂಗ್​ ಕೂಡ ಆರಂಭಗೊಂಡಿದೆ.

ಇದನ್ನೂ ಓದಿ: ಚೆನ್ನೈನಲ್ಲಿ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಭೇಟಿ ಮಾಡಿದ ಶಿವರಾಜ್‌ಕುಮಾರ್-ಗೀತಾ ದಂಪತಿ

ರಸ್ತೆಬದಿ ನಿಂತವರ ಜತೆ ಮನೆಯವರಂತೆ ಮಾತಾಡಿದ ಶಿವರಾಜ್​ಕುಮಾರ್​; ಸರಳತೆಗೆ ಮತ್ತೊಂದು ಹೆಸರು ಶಿವಣ್ಣ

Follow Us
Web contact

TV9 Kannada

Read More