ಪತ್ನಿ ಗೀತಾ ಮತ್ತು ರಾಘವೇಂದ್ರ ರಾಜ್​ಕುಮಾರ್​ ಮಧ್ಯೆ ನಿಂತು, ತಮ್ಮನ ದೇಹ ಕಂಡು ಬಿಕ್ಕಿ ಬಿಕ್ಕಿ ಅಳುತಾ ನಿತ್ರಾಣಗೊಂಡ ಶಿವಣ್ಣ

ಪತ್ನಿ ಗೀತಾ ಮತ್ತು ರಾಘವೇಂದ್ರ ರಾಜ್​ಕುಮಾರ್​ ಮಧ್ಯೆ ನಿಂತು, ತಮ್ಮನ ದೇಹ ಕಂಡು ಬಿಕ್ಕಿ ಬಿಕ್ಕಿ ಅಳುತಾ ನಿತ್ರಾಣಗೊಂಡ ಶಿವಣ್ಣ

TV9 Web
| Updated By: ಆಯೇಷಾ ಬಾನು

Updated on:Oct 30, 2021 | 3:36 PM

ಪತ್ನಿ ಗೀತಾ ಮತ್ತು ಅಣ್ಣ ರಾಘವೇಂದ್ರ ಮಧ್ಯೆ ನಿಂತು, ತಮ್ಮನ ದೇಹ ಕಂಡು ಬಿಕ್ಕಿ ಬಿಕ್ಕಿ ಅಳುತಾ ಶಿವಣ್ಣ ನಿತ್ರಾಣಗೊಂಡ ವಿಡಿಯೋ ಮನ ಕಲಕುವಂತಿದೆ. ಇಂತಹ ಸಾವು ಕೊಟ್ಟ ಆ ದೇವರು ನಿಜಕ್ಕೂ ಕ್ರೂರಿ ಎಂದು ಶಪಿಸುವಂತಾಗುತ್ತಿದೆ.

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್ ಪಾರ್ಥಿವ ಶರೀರದ ಮುಂದೆ ನಿಂತು ಅಣ್ಣ ಶಿವ ರಾಜ್​ಕುಮಾರ್ ಕಣ್ಣೀರು ಹಾಕಿದ್ದಾರೆ. ತಮ್ಮ ಬಿಟ್ಟು ಹೋದ ಸಂಕಟವನ್ನು ತಾಳಲಾಗದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಪತ್ನಿ ಗೀತಾ ಮತ್ತು ರಾಘವೇಂದ್ರ ರಾಜ್​ಕುಮಾರ್ ಮಧ್ಯೆ ನಿಂತು, ತಮ್ಮನ ದೇಹ ಕಂಡು ಬಿಕ್ಕಿ ಬಿಕ್ಕಿ ಅಳುತಾ ಶಿವಣ್ಣ ನಿತ್ರಾಣಗೊಂಡ ವಿಡಿಯೋ ಮನ ಕಲಕುವಂತಿದೆ. ಇಂತಹ ಸಾವು ಕೊಟ್ಟ ಆ ದೇವರು ನಿಜಕ್ಕೂ ಕ್ರೂರಿ ಎಂದು ಶಪಿಸುವಂತಾಗುತ್ತಿದೆ.

ಹೃದಯವಂತನ ಹೃದಯ ನಿಂತುಹೋಯಿತು.
ಬೆಳಗ್ಗೆ ಎಂದಿನಂತೆ ವರ್ಕೌಟ್ ಮಾಡ್ತಿದ್ದ ಪುನಿತ್ ಏಕಾಏಕಿ ಅಸ್ವಸ್ಥರಾದಂತೆ ಕುಸಿದು ಬಿದ್ದಿದ್ರು, ಕೂಡಲೇ ಅವರನ್ನ ರಮಣರಾವ್ ಕ್ಲಿನಿಕ್ಗೆ ಕರೆದೊಯ್ಯಲಾಗಿತ್ತು. ಆದ್ರೆ ಅಲ್ಲಿ ತೀವ್ರ ಅಸ್ವಸ್ಥರಾದ ಕಾರಣ, ವಿಕ್ರಂ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು. ಆಗಲೇ ಗೊತ್ತಾಗಿತ್ತು, ಹೃದಯವಂತ ಪುನೀತ್ಗೆ ತೀವ್ರ ಹೃದಯಾಘಾತವಾಗಿದೆ ಅನ್ನೋದು. ಈ ವಿಚಾರ ತಿಳಿಯುತ್ತಿದ್ದಂತೆ, ನಾಡಿಗೆ ನಾಡೇ ಶಾಕ್​ಗೆ ಒಳಗಾಗಿತ್ತು. ನೋಡ ನೊಡ್ತಿದ್ದಂತೆಯೇ ವಿಕ್ರಮ್ ಆಸ್ಪತ್ರೆಯ ಎದುರು ಜನರು ಜಮಾಯಿಸಿದ್ರು. ದೊಡ್ಮನೆ ಮಂದಿಯೆಲ್ಲ, ಆಸ್ಪತ್ರೆಗೆ ಓಡೋಡಿ ಬಂದಿದ್ರು. ನಟ ಯಶ್, ದರ್ಶನ್, ಶೃತಿ, ರಾಕ್ಲೈನ್ ವೆಂಕಟೇಶ್, ರವಿಚಂದ್ರನ್ ಹೀಗೆ ಎಲ್ಲರೂ ಆಸ್ಪತ್ರೆಗೆ ದೌಡಾಯಿಸಿದ್ರು. ಎಲ್ಲರ ಪ್ರಾರ್ಥನೆ, ಎಲ್ಲರ ಹರಕೆ ಒಂದೆ ಆಗಿತ್ತು. ಪುನಿತ್ ಗುಣವಾಗಿ ಬನ್ನಿ ಅನ್ನೋದು. ಆದ್ರೆ ಯಾವುದು ಆಗಬಾರದು ಅಂತಾ ಇಡೀ ನಾಡೇ ಬೇಡಿಕೊಳ್ತಿತ್ತೋ, ಅದು ಆಗಲೇ ಇಲ್ಲ.

Published on: Oct 30, 2021 02:34 PM