‘45’ ಕಥೆ ಕೇಳಿ ಶಿವಣ್ಣ ಹೇಳಿದ್ದೇನು?; ಇಲ್ಲಿದೆ ಅಚ್ಚರಿಯ ರಿಯಾಕ್ಷನ್
ಅರ್ಜುನ್ ಜನ್ಯ ಅವರು ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಕಥೆ ಕೇಳಿ ಶಿವರಾಜ್ಕುಮಾರ್ ಅವರು ಸಖತ್ ಥ್ರಿಲ್ ಆಗಿದ್ದರು. ಈ ಬಗ್ಗೆ ಅರ್ಜುನ್ ಜನ್ಯ ಅವರು ಮಾಹಿತಿ ನೀಡಿದ್ದಾರೆ.
ಶಿವರಾಜ್ಕುಮಾರ್ (Shivarajkumar) ನಟನೆಯ ‘45’ ಸಿನಿಮಾದ (45 Movie) ಟೈಟಲ್ ಲಾಂಚ್ ಆಗಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಆ್ಯಕ್ಷನ್ ಕಟ್ ಹೇಳುತ್ತಾರೆ ಎಂಬ ವಿಚಾರ ಕೇಳಿ ಸಾಕಷ್ಟು ಜನರು ಅಚ್ಚರಿ ಹೊರಹಾಕಿದ್ದರು. ಸಂಗೀತ ಸಂಯೋಜನೆ ಮಾಡುವ ಮೂಲಕ ಸಾಕಷ್ಟು ಗಮನ ಸೆಳೆದಿರುವ ಅರ್ಜುನ್ ಜನ್ಯ ಅವರು ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಕಥೆ ಕೇಳಿ ಶಿವರಾಜ್ಕುಮಾರ್ ಅವರು ಸಖತ್ ಥ್ರಿಲ್ ಆಗಿದ್ದರು. ಈ ಬಗ್ಗೆ ಅರ್ಜುನ್ ಜನ್ಯ ಅವರು ಮಾಹಿತಿ ನೀಡಿದ್ದಾರೆ.