‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ನೇರವಾಗಿ ಹೇಳಿದ ಶಿವಣ್ಣ
ಶಿವರಾಜ್ಕುಮಾರ್ ನಟಿಸಿದ ‘ಬೇಲ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಗೆಟಪ್ ಬೇರೆ ರೀತಿ ಇದೆ. ಆ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ನಟಿಸಿದ್ದ ‘ಸತ್ಯ ಇನ್ ಲವ್’ ಹಾಗೂ ‘ಜೋಗಯ್ಯ’ ಸಿನಿಮಾದ ಗೆಟಪ್ ತಮಗೆ ಇಷ್ಟ ಆಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಶಿವರಾಜ್ಕುಮಾರ್ ಅವರು ನಟಿಸಿದ ‘ಬೇಲ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಅವರ ಗೆಟಪ್ ಬೇರೆ ರೀತಿ ಇದೆ. ಆ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ನಟಿಸಿದ್ದ ‘ಸತ್ಯ ಇನ್ ಲವ್’ ಮತ್ತು ‘ಜೋಗಯ್ಯ’ ಸಿನಿಮಾದ ಗೆಟಪ್ ತಮಗೆ ಇಷ್ಟ ಆಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ‘ನನಗೆ ವಯಸ್ಸಾಗಿದೆ. ಅದನ್ನು ಒಪ್ಪಿಕೊಳ್ಳಬೇಕು. ಆದರೂ ಇಂಥ ಪಾತ್ರ ಮಾಡುತ್ತೇನೆ ಎಂಬ ಪಾಸಿಟಿವ್ ಮನೋಭಾವ ಇರಬೇಕು. ಈ ಚಿತ್ರದ ಗೆಟಪ್ ಬಗ್ಗೆ ನನಗೆ ಅನುಮಾನ ಇತ್ತು. ಈ ಹಿಂದೆ ಎರಡು-ಮೂರು ಸಿನಿಮಾಗಳಲ್ಲಿ ಆ ರೀತಿ ಆಗಿದೆ. ಜೋಗಯ್ಯ ಮತ್ತು ಸತ್ಯ ಇನ್ ಲವ್ ಸಿನಿಮಾಗಳಲ್ಲಿ ನನಗೆ ವಿಗ್ ಇಷ್ಟ ಆಗಿರಲಿಲ್ಲ. ಏನೂ ಮಾಡೋಕೆ ಆಗಲ್ಲ. ನಾವು ಕೆಲವೊಮ್ಮೆ ವಿಫಲರಾಗುತ್ತೇವೆ. ತಪ್ಪೇನೂ ಇಲ್ಲ’ ಎಂದು ಶಿವಣ್ಣ ಹೇಳಿದ್ದಾರೆ. ‘ಬೇಲ್’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
