ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಶಿವರಾಜ್ಕುಮಾರ್; ಫ್ಯಾನ್ಸ್ ಇದನ್ನು ನಡೆಸಿಕೊಡ್ತಾರಾ?
ಕೊವಿಡ್ ಎರಡನೇ ಅಲೆ ತಣ್ಣಗಾಗುತ್ತಿದೆ ಎಂದು ಮೈಮರೆಯೋದು ಬೇಡ ಎಂದು ಸರ್ಕಾರ ಎಚ್ಚರಿಸಿದೆ. ಶಿವರಾಜ್ಕುಮಾರ್ ಕೂಡ ಇದೇ ರೀತಿಯ ಮನವಿ ಮಾಡಿಕೊಂಡಿದ್ದಾರೆ.
ಕೊವಿಡ್ ಎರಡನೇ ಅಲೆ ಕಡಿಮೆ ಆಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಶೇ.100 ಸ್ಥಾನ ಭರ್ತಿಗೆ ಅವಕಾಶ ನೀಡಲಾಗಿದೆ. ಇದು ಫ್ಯಾನ್ಸ್ಗೆ ಖುಷಿ ನೀಡಿದೆ. ಚಿತ್ರಮಂದಿರದಲ್ಲಿ ನೆಚ್ಚಿನ ನಟನ ಕಟೌಟ್ ನಿಲ್ಲಿಸಿ ಸಂಭ್ರಮಿಸೋಕೆ ರೆಡಿ ಆಗುತ್ತಿದ್ದಾರೆ. ಹೀಗಿರುವಾಗಲೇ ಶಿವರಾಜ್ಕುಮಾರ್ ಅವರು ವಿಶೇಷ ಮನವಿ ಒಂದನ್ನು ಮಾಡಿದ್ದಾರೆ.
ಕೊವಿಡ್ ಎರಡನೇ ಅಲೆ ತಣ್ಣಗಾಗುತ್ತಿದೆ ಎಂದು ಮೈಮರೆಯೋದು ಬೇಡ ಎಂದು ಸರ್ಕಾರ ಎಚ್ಚರಿಸಿದೆ. ಶಿವರಾಜ್ಕುಮಾರ್ ಕೂಡ ಇದೇ ರೀತಿಯ ಮನವಿ ಮಾಡಿಕೊಂಡಿದ್ದಾರೆ. ಸಿನಿಮಾ ನೋಡುವಾಗ ಅಭಿಮಾನಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಕೋರಿದ್ದಾರೆ.
ಇದನ್ನೂ ಓದಿ: ಸ್ಟಾರ್ ನಟರ ಮುಖಾಮುಖಿ; ಈಗ ಚಿತ್ರರಂಗದಲ್ಲಿ ಹೊಂದಾಣಿಕೆ ಮುಖ್ಯ ಎಂದ ಶಿವರಾಜ್ಕುಮಾರ್