‘ಪದೇಪದೇ 60 ಅಂತಾರೆ’: ವಯಸ್ಸಿನ ಬಗ್ಗೆ ನಿರೂಪಕಿ ಮಾತಾಡಿದ್ದಕ್ಕೆ ಶಿವಣ್ಣನ ರಿಯಾಕ್ಷನ್​ ಹೇಗಿತ್ತು?

| Updated By: ಮದನ್​ ಕುಮಾರ್​

Updated on: Aug 01, 2022 | 8:36 AM

‘ಗಾಳಿಪಟ 2’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ಗೆ ಶಿವರಾಜ್​ಕುಮಾರ್​ ಅತಿಥಿಯಾಗಿ ಬಂದಿದ್ದರು. ವಯಸ್ಸಿನ ಬಗ್ಗೆ ನಿರೂಪಕಿ ಮಾತಾಡಿದ್ದಕ್ಕೆ ಅವರು ನಗುತ್ತಲೇ ಪ್ರತಿಕ್ರಿಯೆ ನೀಡಿದರು.

ನಟ ಶಿವರಾಜ್​ಕುಮಾರ್​ (Shivarajkumar) ಅವರ ಎನರ್ಜಿ ಕಂಡರೆ ಎಲ್ಲರಿಗೂ ಅಚ್ಚರಿ ಆಗುತ್ತದೆ. ಅವರಿಗೆ 60 ವರ್ಷ ವಯಸ್ಸು. ಈಗಲೂ ಅವರು ಸಿನಿಮಾಗಳಲ್ಲಿ ಭರ್ಜರಿಯಾಗಿ ಫೈಟ್​ ಮಾಡುತ್ತಾರೆ. ಯುವಕರೂ ನಾಚುವಂತೆ ಡ್ಯಾನ್ಸ್​ ಮಾಡುತ್ತಾರೆ. ಹಾಗಾಗಿ ಅವರಿಗೆ 60 ವರ್ಷ ಆದರೂ ಕೂಡ ಎನರ್ಜಿ 16ನೇ ವಯಸ್ಸಿನವರ ಹಾಗಿದೆ. ಈ ಬಗ್ಗೆ ಅನೇಕ ವೇದಿಕೆಯಲ್ಲಿ ಪ್ರಸ್ತಾಪ ಆಗುವುದುಂಟು. ‘ಗಾಳಿಪಟ 2’ (Gaalipata 2) ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲೂ ನಿರೂಪಕಿ ಈ ಮಾತು ಹೇಳಿದ್ದರು. ಆಗ ಶಿವಣ್ಣ, ‘ಪದೇಪದೇ 60 ಅಂತಾರೆ’ ಎಂದು ಹೇಳಿ ನಕ್ಕರು.