ಸುದೀಪ್, ದರ್ಶನ್, ಯಶ್ ಫ್ಯಾನ್ಸ್ ಕೂಡ ನನಗಾಗಿ ಪ್ರಾರ್ಥನೆ ಮಾಡಿದ್ದರು: ಶಿವಣ್ಣ
ನಟ ಶಿವರಾಜ್ಕುಮಾರ್ ಕ್ಯಾನ್ಸರ್ ಗೆದ್ದು ಬಂದಿದ್ದಾರೆ. ಆಪರೇಷನ್ ಆದ ಬಳಿಕ ಅವರು ‘ಟಿವಿ9’ ಜತೆ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಶಿವಣ್ಣ ಅವರು ಆದಷ್ಟು ಬೇಗ ಗುಣಮುಖರಾಗಲಿ ಅಂತ ಬೇರೆ ನಟರ ಫ್ಯಾನ್ಸ್ ಕೂಡ ಪ್ರಾರ್ಥನೆ ಮಾಡಿದ್ದರು. ಆ ಬಗ್ಗೆ ಶಿವರಾಜ್ಕುಮಾರ್ ಮಾತನಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಜಯಿಸಿ ಬಂದಿದ್ದಾರೆ. ಸರ್ಜರಿ ಬಳಿಕ ಅವರು ಟಿವಿ9 ಜೊತೆ ಮಾತನಾಡಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಿವಣ್ಣ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದರು. ಅಭಿಮಾನಿಗಳು ಎಂದರೆ ಕೇವಲ ಶಿವರಾಜ್ಕುಮಾರ್ ಅವರ ಅಭಿಮಾನಿಗಳು ಮಾತ್ರವಲ್ಲ. ಸುದೀಪ್, ದರ್ಶನ್, ಯಶ್, ಗಣೇಶ್, ಧ್ರುವ ಸರ್ಜಾ, ದುನಿಯಾ ವಿಜಯ್ ಮುಂತಾದ ಹೀರೋಗಳ ಫ್ಯಾನ್ಸ್ ತಮಗಾಗಿ ಪ್ರಾರ್ಥಿಸಿದ್ದರು ಎಂದು ಶಿವಣ್ಣ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
