ಉಕ್ರೇನ್ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಶೋಭಾ ಕರಂದ್ಲಾಜೆ ಭೇಟಿ
ನವೀನ ಇವತ್ತು ನಮ್ಮ ಜೊತೆ ಇಲ್ಲ. ನಮ್ಮೂರಿನ ನವೀನನನ್ನ ಕಳೆದುಕೊಂಡಿದ್ದೇವೆ. ಉಳಿದವರನ್ನ ಕರೆತರುವ ಕೆಲಸ ಆಗಿತ್ತಿದೆ. ಇಪ್ಪತ್ತು ಸಾವಿರ ಜನರು ಉಕ್ರೇನ್ ನಲ್ಲಿದ್ದಾರೆ. ಅದರಲ್ಲಿ ಹದಿನೆಂಟು ಸಾವಿರ ವಿದ್ಯಾರ್ಥಿಗಳಿದ್ದಾರೆ. ಈ ಊರಿನ ಇನ್ನಿಬ್ಬರು ವಿದ್ಯಾರ್ಥಿಗಳು ಅಲ್ಲಿದ್ದಾರೆ. ಅವರನ್ನೂ ಕರೆತರುವ ಕೆಲಸ ಮಾಡಲಾಗುತ್ತಿದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಹಾವೇರಿ: ಮೃತ ನವೀನ ನಿವಾಸಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ ನಿವಾಸಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದಾರೆ. ನವೀನ ಇವತ್ತು ನಮ್ಮ ಜೊತೆ ಇಲ್ಲ. ನಮ್ಮೂರಿನ ನವೀನನನ್ನ ಕಳೆದುಕೊಂಡಿದ್ದೇವೆ. ಉಳಿದವರನ್ನ ಕರೆತರುವ ಕೆಲಸ ಆಗಿತ್ತಿದೆ. ಇಪ್ಪತ್ತು ಸಾವಿರ ಜನರು ಉಕ್ರೇನ್ ನಲ್ಲಿದ್ದಾರೆ. ಅದರಲ್ಲಿ ಹದಿನೆಂಟು ಸಾವಿರ ವಿದ್ಯಾರ್ಥಿಗಳಿದ್ದಾರೆ. ಈ ಊರಿನ ಇನ್ನಿಬ್ಬರು ವಿದ್ಯಾರ್ಥಿಗಳು ಅಲ್ಲಿದ್ದಾರೆ. ಅವರನ್ನೂ ಕರೆತರುವ ಕೆಲಸ ಮಾಡಲಾಗುತ್ತಿದೆ. ಬೇರೆ ದೇಶಗಳು ಅಲ್ಲಿನ ಮಕ್ಕಳನ್ನ ಕರೆಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ವಾಪಸ್ ಕರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ನವೀನನನ್ನ ನಾವು ಕಳೆದುಕೊಂಡಿದ್ದೇವೆ. ಅಲ್ಲಿರುವ ಮಕ್ಕಳನ್ನ ವಾಪಸ್ ಕರೆತರಬೇಕು ಎಂಬುವುದು ನವೀನ ತಂದೆ ತಾಯಿಗಳ ಬೇಡಿಕೆಯಾಗಿದೆ. ಅಲ್ಲಿರುವ ವಿಶ್ವವಿದ್ಯಾಲಯಗಳ ಬೇಜವಾಬ್ದಾರಿಯಿಂದ ವೈದ್ಯಕೀಯ ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ. ನವೀನ ಕುಟುಂಬದ ಜೊತೆ ಭಾರತ ಸರಕಾರವಿದೆ. ಅಲ್ಲಿರುವ ಎಲ್ಲರನ್ನ ಕರೆದುಕೊಂಡು ಬರುವ ಕೆಲಸವನ್ನ ಸರಕಾರ ಮಾಡುತ್ತಿದೆ. ಕೇಂದ್ರ ಸಚಿವರನ್ನ ಅಲ್ಲಿಗೆ ನೇಮಕ ಮಾಡಲಾಗಿದೆ. ಅಲ್ಲಿರುವ ಮಕ್ಕಳು ಮತ್ತು ನಾಗರಿಕರನ್ನ ವಾಪಸ್ ಕರೆತರುವ ಉಸ್ತುವಾರಿ ಹೊತ್ತಿದ್ದಾರೆ. ಇಪ್ಪತ್ತು ಸಾವಿರ ಜನರ ಪೈಕಿ ನಮ್ಮೂರಿನ ಹುಡುಗ ಮೃತಪಟ್ಟಿದ್ದು ಬೇಸರದ ಸಂಗತಿ. ಯುದ್ಧದ ಮುನ್ಸೂಚನೆ ಇದ್ದಾಗ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನ ಅಲರ್ಟ್ ಮಾಡಲಾಗಿತ್ತು. ಬೇರೆ ರಾಷ್ಟ್ರ ಮಾಡದ ಕೆಲಸವನ್ನ ನಮ್ಮ ಸರಕಾರ ಮಾಡುತ್ತಿದೆ. ಮೆರಿಟ್ ವಿದ್ಯಾರ್ಥಿಗಳಿಗೆ ನೀಟ್ ಸೀಟು ಸಿಗುತ್ತದೆ. ನೀಟ್ ಬಂದ ಮೇಲೆ ಬಡವರ ಬುದ್ಧಿವಂತ ಮಕ್ಕಳಿಗೆ ಸೀಟು ಸಿಗುತ್ತದೆ. ನಮ್ಮ ನವೀನ ಪ್ರತಿಭಾವಂತ ಆಗಿದ್ದರೂ ಸೀಟು ಸಿಗದಿರೋದು ದುಃಖದ ಸಂಗತಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಹರ್ಷ ಹತ್ಯೆಗೆ ಅಂತರಾಷ್ಟ್ರೀಯ ಪಿತೂರಿ, ಪ್ರಕರಣ ಎನ್ಐಎಗೆ ಕೊಡಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ