Viral Video: ಭಾರೀ ಮಳೆಯಿಂದ ಟ್ರಾಫಿಕ್​ನಲ್ಲಿ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!

|

Updated on: Jul 01, 2024 | 10:14 PM

Maharashtra Rains: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಆರೆಂಜ್ ಮತ್ತು ಹಳದಿ ಅಲರ್ಟ್​ ಘೋಷಿಸಲಾಗಿದೆ. ಇದರ ನಡುವೆ ನಿನ್ನೆ ರಾತ್ರಿ ಸುರಿದ ಮಳೆಯಿಂದ ರಸ್ತೆಗಳ ತುಂಬ ನೀರು ಉಕ್ಕಿ ಹರಿಯುತ್ತಿದೆ. ಈ ವೇಳೆ ಟ್ರಾಫಿಕ್​ನಲ್ಲಿ ಸಿಲುಕಿದ್ದ ವಾಹನ ಸವಾರರ ಎದುರು ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದ ರಸ್ತೆಗಳ ತುಂಬ ನೀರು ಉಕ್ಕಿ ಹರಿಯುತ್ತಿದ್ದು, ಪ್ರವಾಹದ ಸ್ಥಿತಿ ಉಂಟಾಗಿತ್ತು. ಇದರ ನಡುವೆ ರತ್ನಗಿರಿ ಪಟ್ಟಣದಲ್ಲಿ ಟ್ರಾಫಿಕ್​ನಲ್ಲಿ ಸಿಲುಕಿದ್ದ ವಾಹನ ಸವಾರರ ಮುಂದೆ ಬರೋಬ್ಬರಿ 8 ಅಡಿ ಉದ್ದದ ಮೊಸಳೆ ಓಡಾಡುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲುನ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ರಸ್ತೆಯಲ್ಲಿ 8 ಅಡಿ ಉದ್ದದ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಉಂಟುಮಾಡಿದೆ. ಈ ಮೊಸಳೆಯನ್ನು ನೋಡಿದ ಕೆಲವು ವಾಹನಗಳು ಎಚ್ಚರಿಕೆಯಿಂದ ಹಿಂದೆ ಸರಿಯುತ್ತಿದ್ದರೆ ಇನ್ನು ಕೆಲವರು ತಮ್ಮ ವಾಹನ ನಿಲ್ಲಿಸಿ ಅದರ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ.

ಭಾರತದಲ್ಲಿನ ಮೂರು ಮೊಸಳೆ ಜಾತಿಗಳಲ್ಲಿ ಒಂದಾದ ಮಗ್ಗರ್ ಮೊಸಳೆಗಳು ರತ್ನಗಿರಿಯಲ್ಲಿ ಸಾಮಾನ್ಯವಾಗಿವೆ. ಆದರೆ ಇದೇ ಮೊದಲ ಬಾರಿಗೆ ಈ ಮೊಸಳೆ ಟ್ರಾಫಿಕ್​ ಮಧ್ಯೆ ಕಾಣಿಸಿಕೊಂಡಿದೆ. ಇದು ಪಕ್ಕದಲ್ಲಿರುವ ನದಿಗೆ ಹೋಗಿರುವ ಸಾಧ್ಯತೆಯಿದೆ. ಈ ಪಟ್ಟಣದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ