ತಡೆಗೋಡೆ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುವಾಗ ಸಮುದ್ರಕ್ಕೆ ಬಿದ್ದ ಯುವತಿ; ವ್ಯಕ್ತಿಯ ಸಮಯಪ್ರಜ್ಞೆಯಿಂದ ಬಚಾವ್
ಸಮುದ್ರಕ್ಕೆ ಬಿದ್ದಿದ್ದ ಯುವತಿಯ ರಕ್ಷಣೆ

ತಡೆಗೋಡೆ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುವಾಗ ಸಮುದ್ರಕ್ಕೆ ಬಿದ್ದ ಯುವತಿ; ವ್ಯಕ್ತಿಯ ಸಮಯಪ್ರಜ್ಞೆಯಿಂದ ಬಚಾವ್

| Updated By: Skanda

Updated on: Jul 14, 2021 | 9:46 AM

ಸಮುದ್ರದ ತಡೆಗೋಡೆ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಈ ಯುವತಿ ಆಯ ತಪ್ಪಿ ಸಮುದ್ರಕ್ಕೇ ಬಿದ್ದಿದ್ದಾಳೆ. ಅದೃಷ್ಟವಶಾತ್, ಅಲ್ಲೇ ಇದ್ದ ವ್ಯಕ್ತಿಯೊಬ್ಬ ಸಮಯಪ್ರಜ್ಞೆ ಮೆರೆದು ಸಮುದ್ರಕ್ಕೆ ಜಿಗಿದು ಆಕೆಯನ್ನು ರಕ್ಷಿಸಿದ ಪರಿಣಾಮ ದೊಡ್ಡ ಕಂಟಕದಿಂದ ಪಾರಾಗಿದ್ದಾಳೆ.

ಸ್ಮಾರ್ಟ್​ಫೋನ್​ ಬಳಕೆ ಹೆಚ್ಚಾದ ನಂತರ ಅನುಕೂಲಗಳು ಎಷ್ಟರ ಮಟ್ಟಿಗೆ ಆಗಿದೆಯೋ ಅಷ್ಟೇ ಅಥವಾ ಅದಕ್ಕಿಂತ ತುಸು ಹೆಚ್ಚೇ ಅನಾನುಕೂಲಗಳೂ ಆಗಿವೆ ಎಂದರೆ ಅತಿಶಯೋಕ್ತಿಯಲ್ಲ. ತಂತ್ರಜ್ಞಾನ ಬೆಳೆದಂತೆ ಮನುಷ್ಯ ಅದರ ಸದುಪಯೋಗಪಡೆದುಕೊಳ್ಳುವ ಬದಲು ಅಡಿಯಾಳಾಗಿದ್ದೇ ಅನೇಕ ದುರಂತಗಳಿಗೆ ಕಾರಣವಾಗಿವೆ. ಮೇಲ್ನೋಟಕ್ಕೆ ಸಾಧಾರಣ ಸಂಗತಿಯಂತೆ ಕಾಣುವ ಸೆಲ್ಫಿ ಕ್ರೇಜ್​ ಕೂಡಾ ಯುವ ಸಮುದಾಯವನ್ನು ದೊಡ್ಡ ಸ್ವರೂಪದಲ್ಲಿ ಭಾದಿಸುತ್ತಿದೆ. ಸೆಲ್ಫಿ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಂಡವರು ಎಷ್ಟೋ ಜನರಿದ್ದಾರೆ. ಈ ವಿಡಿಯೋದಲ್ಲಿನ ಯುವತಿಯ ಅದೃಷ್ಟವೋ, ಏನೋ ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಬಚಾವಾಗಿದ್ದಾಳೆ.

ಸಮುದ್ರದ ತಡೆಗೋಡೆ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಈ ಯುವತಿ ಆಯ ತಪ್ಪಿ ಸಮುದ್ರಕ್ಕೇ ಬಿದ್ದಿದ್ದಾಳೆ. ಅದೃಷ್ಟವಶಾತ್, ಅಲ್ಲೇ ಇದ್ದ ವ್ಯಕ್ತಿಯೊಬ್ಬ ಸಮಯಪ್ರಜ್ಞೆ ಮೆರೆದು ಸಮುದ್ರಕ್ಕೆ ಜಿಗಿದು ಆಕೆಯನ್ನು ರಕ್ಷಿಸಿದ ಪರಿಣಾಮ ದೊಡ್ಡ ಕಂಟಕದಿಂದ ಪಾರಾಗಿದ್ದಾಳೆ. ಸೆಲ್ಫಿ ಕ್ರೇಜ್​ನಿಂದ ಅಪಾಯ ಎದುರಾಗುತ್ತಿರುವ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದರೂ ಜನ ಇನ್ನೂ ಎಚ್ಚೆತ್ತುಕೊಳ್ಳದಿರುವುದು ದುರಂತವೇ ಸರಿ.

ಇದನ್ನೂ ಓದಿ:
ಪರಿಸರ ವ್ಯವಸ್ಥೆಗೆ ಹಾನಿ ಮಾಡುತ್ತಿವೆ ಸರೋವರಗಳಿಗೆ ಎಸೆಯುತ್ತಿರುವ ಗೋಲ್ಡ್​ ಫಿಶ್​