ಹಾಸ್ಟೆಲೊಂದಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಅಹವಾಲನ್ನು ಆಲಿಸಿದ ಸುರಪುರ ಶಾಸಕ ವೇಣುಗೋಪಾಲ್ ನಾಯಕ್
ಹಾಸ್ಟೆಲ್ನಲ್ಲಿ ಪ್ರತಿದಿನ ಮಕ್ಕಳಿಗೆ ನೀಡುವ ಆಹಾರವನ್ನೇ ವಾರ್ಡನ್ಗಳಿಗೆ ಉಣಬಡಿಸುವ ನಿಯಮವನ್ನು ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಎಸ್ಸಿ ಎಸ್ಟಿ ಕಲ್ಯಾಣ ಇಲಾಖೆಗಳು ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ, ಶಾಸಕರು ಮತ್ತು ಉಪ ಲೋಕಾಯುಕ್ತರು ಭೇಟಿ ನೀಡಿದ ಒಂದೆರಡು ದಿನಗಳ ಕಾಲ ವಾರ್ಡನ್ ಗಳು ಉತ್ತಮ ಆಹಾರವನ್ನು ನೀಡಿ ಪುನಃ ತಮ್ಮ ಹಳೆಯ ಚಾಳಿಗೆ ವಾಪಸ್ಸಾಗುತ್ತಾರೆ.
ಯಾದಗಿರಿ: ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ್ ಇಂದು ಪಟ್ಟಣದ ಮೆಟ್ರಿಕ್ ನಂತರದ ಹಾಸ್ಟೆಲ್ ಒಂದಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ವೀಕ್ಷಿಸಿದರು. ಭೇಟಿಯ ವೇಳೆ ಹಾಸ್ಟೆಲ್ನ ಎಲ್ಲ ಕೋಣೆ ಮತ್ತು ಅಡುಗೆ ಮನೆಯನ್ನು ಪರಿಶೀಲಿಸಿದ ಶಾಸಕ ವಿದ್ಯಾರ್ಥಿಗಳ ಅಹವಾಲುಗಳನ್ನು ಕೇಳಿದರು. ಮೆನು ಪ್ರಕಾರ ವಿದ್ಯಾರ್ಥಿಗಳಿಗೆ ಊಟ ನೀಡದಿರುವ ವಿಷಯ ಗೊತ್ತಾದ ಬಳಿಕ ಹಾಸ್ಟೆಲ್ ವಾರ್ಡನ್ ಮೇಲೆ ರೇಗಿದರು. ವಾರ್ಡನ್ ಗಳು ಸಾಮಾನ್ಯವಾಗಿ ಉಡಾಫೆ ನೀಡುವುದರಲ್ಲಿ ಪರಿಣಿತರು. ಇಲ್ಲಿಯ ವಾರ್ಡನ್ ಸಹ ಅದೇ ವರಸೆ ಪ್ರದರ್ಶಿಸಿದಾಗ ಶಾಸಕ ತರಾಟೆಗೆ ತೆಗೆದುಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ