ಚಿನ್ನದ ಡಿಜಿಟಲ್ ಅವತಾರದ ಮೇಲೆ ಹೂಡಿಕೆ ಮಾಡಬೇಕಾ ಅಥವಾ ಮಾಡಬಾರದಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Mar 25, 2022 | 8:34 AM

ಯಾವ ಪ್ಲಾಟ್ ಪಾರ್ಮ್​ನಿಂದ ಚಿನ್ನವನ್ನು ಕೊಳ್ಳಲಾಯಿತೋ ಅದೇ ಇದರ ನಿರ್ವಹಣೆಯನ್ನು ಮಾಡುತ್ತದೆ. ಅದರ ಬೆಲೆಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ.

ನಿಮಗೆ ಚಿನ್ನ ಖರೀದಿಸುವ ಆಸೆಯಿದೆ. ಆದರೆ ನಿಮ್ಮ ಜೇಬಲ್ಲಿ ಕೇವಲ ಒಂದು ರೂ. ಇದೆ. ಆದ್ರೂ ಕೂಡ ನೀವು ನಿಮ್ಮ ಆಸೆಯನ್ನ ಪೂರೈಸಿಕೊಳ್ಳಬಹುದು. ಅದು ಹೇಗೆ ಎಂದರೇ ಮಾರುಕಟ್ಟೆಯಲ್ಲಿ ಈಗ ಡಿಜಿಟಲ್ ಚಿನ್ನ (DIGITAL GOLD) ಎನ್ನುವ ಹೊಸ ಪ್ರವೃತ್ತವಾಗಿದೆ. ಹಾಗಾದರೇ ಚಿನ್ನವನ್ನ ಕೊಳ್ಳಲು ಅಂಗಡಿಗೆ ಹೋಗಬೇಕೇಂದಿಲ್ಲ. ಅಥವಾ ಅದರ ಶುದ್ಧತೆಯ ಬಗ್ಗೆ ಪರಿಶೀಲಿಸುವ ಅಗತ್ಯವೂ ಇಲ್ಲ. ಹಾಗಾದರೇ ಈ ಡಿಜಿಟಲ್ ಚಿನ್ನ ಎಂದರೇನು? ಡಿಜಿಟಲ್ ಚಿನ್ನ ಅನ್ನೋದು ವಸ್ತು ರೂಪದಲ್ಲಿ ಚಿನ್ನವನ್ನು ಕೊಳ್ಳಬಲ್ಲ ಒಂದು ಆನ್​ಲೈನ್ ಚಾನಲ್. ನಿಮ್ಮ ಹೆಸರಿನಲ್ಲಿ 24 ಚಿನ್ನವನ್ನು ಒಂದು ಲಾಕರ್​ನಲ್ಲಿ ಇಡಲಾಗುತ್ತದೆ. ಯಾವ ಪ್ಲಾಟ್ ಪಾರ್ಮ್​ನಿಂದ ಚಿನ್ನವನ್ನು ಕೊಳ್ಳಲಾಯಿತೋ ಅದೇ ಇದರ ನಿರ್ವಹಣೆಯನ್ನು ಮಾಡುತ್ತದೆ. ಅದರ ಬೆಲೆಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ನೀವು ಕೊಳ್ಳುವಾಗ ಅದನ್ನು ಪ್ರತ್ಯಕ್ಷವಾಗಿ ನೋಡಬಹುದು. ಈ ಡಿಜಿಟಲ್ ಚಿನ್ನದ ಪ್ರಕ್ರಿಯೆಯನ್ನು ಇನ್ನಷ್ಟು ತಿಳಿಯಲು ಈ ವಿಡಿಯೋವನ್ನು ನೋಡಿ.

ಇದನ್ನೂ ಓದಿ:

ಬಹುನಿರೀಕ್ಷಿತ ಆರ್​ಆರ್​ಆರ್​ ಚಿತ್ರ ರಿಲೀಸ್​; ಪಟಾಕಿ ಹೊಡೆದು, ಕೇಕೆ ಹಾಕಿ ಅಭಿಮಾನಿಗಳ ಹರ್ಷೋದ್ಘಾರ