ಶ್ರೀ ರಾಮಾಯಣ ಎಕ್ಸ್​ಪ್ರೆಸ್​ ರೈಲು ನವೆಂಬರ್ 7 ರಂದು ನವದೆಹಲಿಯಿಂದ ಹೊರಡಲಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 13, 2021 | 8:43 PM

ಪ್ರಯಾಣಿಕರಿಗೆ ರೇಲ್ವೇಸ್ ಶುದ್ಧ ಸಸ್ಯಾಹಾರಿ ಊಟ ಮತ್ತು ವಸತಿ ಸೌಕರ್ಯವನ್ನು ಕಲ್ಪಿಸಲಿದೆ. ನಾನ್-ಎಸಿ ಪ್ರಯಾಣಿಕರಿಗೆ ಧರ್ಮಶಾಲೆಗಳಲ್ಲಿ ಸ್ನಾನದ ವ್ಯವಸ್ಥೆ ಮಾಡಲಾಗುತ್ತದೆ. ಎಸಿ-ಕೋಚ್ ಪ್ರಯಾಣಿಕರಿಗೆ ಈ ವ್ಯವಸ್ಥೆಯನ್ನು ಹೋಟೆಲ್ಗಳಲ್ಲಿ ಮಾಡಲಾಗುತ್ತದೆ.

ಶ್ರೀ ರಾಮಾಯಣ ಎಕ್ಸ್ಪ್ರೆಸ್ ಬಗ್ಗೆ ನೀವೂ ಕೇಳಿರಬಹುದು. ಭಾರತೀಯ ರೇಲ್ವೇಸ್ (ಐಆರ್ ಸಿಟಿಸಿ) ಮಾರ್ಚ್ 2020 ರಿಂದ ಈ ರೈಲನ್ನು ಓಡಿಸುತ್ತಿದೆ. ಈ ರೈಲಿನ ವೈಶಿಷ್ಟ್ಯತೆಯೆಂದರೆ ರಾಮ ನಡೆದಾಡಿದ ಎಲ್ಲ ಸ್ಥಳಗಳ ಮೂಲಕ ಇದು ಹಾದುಹೋಗಲಿದೆ. ಶ್ರೀ ರಾಮಾಯಣ ಎಕ್ಸ್ಪ್ರೆಸ್ ಹತ್ತು ಕೋಚ್​ಗಳ ರೈಲಾಗಿದ್ದು ಇದರಲ್ಲಿ 5 ವಾತಾನುಕೂಲಿತವಲ್ಲದ ಕೋಚ್ ಮತ್ತು ಉಳಿದೈದು ಎಸಿ 3-ಟಿಯರ್ ಕೋಚ್​ಗಳಾಗಿರುತ್ತವೆ.

ಸದರಿ ರೈಲುಯಾನವು 16 ರಾತ್ರಿ ಮತ್ತು 17 ಹಗಲುಗಳನ್ನೊಳಗೊಂಡ ಪ್ಯಾಕೇಜ್ ಆಗಿದೆ. ನವೆಂಬರ್ 7 ರಂದು ಟ್ರೇನ್ ದೆಹಲಿಯ ಸಫ್ದರ್ ಜಂಗ್ ಸ್ಟೇಷನ್ ನಿಂದ ಹೊರಡಲಿದೆ. ಇದರಲ್ಲಿ ಪ್ರಯಾಣಿಸುವವರು, ರಾಮ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಎಲ್ಲ ಪ್ರದೇಶಗಳನ್ನು ನೋಡಲಿದ್ದಾರೆ.

ಹಾಗಾದರೆ ಯಾವ್ಯಾವ ಸ್ಥಳಗಳನ್ನು ಟ್ರೇನ್ ಸಂದರ್ಶಿಸಲಿದೆ ಅಂತ ನೋಡೋಣ.

ಅಯೋಧ್ಯಾನಲ್ಲಿರುವ ರಾಮ ಜನ್ಮಭೂಮಿ ಮತ್ತು ಹನುಮಾನ ಘರಿ, ವಾರಣಾಸಿಯ ತುಳಸಿ ಮಾನಸ ಮಂದಿರ ಮತ್ತು ಸಂಕಟ್ ಮೋರ್ಚಾ ಮಂದಿರ, ಬಿಹಾರಿನ ಸೀತಂಮರ್ಹಿಯಲ್ಲಿರುವ ಸೀತಾ ಮಾತಾ ಮಂದಿರ, ಭರತ್ ಮಂದಿರ ನಂದಿಗ್ರಾಮ, ನೇಪಾಳದ ಜನಕ್ಪುರ, ಯುಪಿಯಲ್ಲಿರುವ ಸೀತಾ ಸಮಾಹಿತ್ ಸ್ಥಳ, ಪ್ರಯಾಗ್ ನಲ್ಲಿರುವ ಹನುಮಾನ್ ಮಂದಿರ ಮತ್ತು ಭಾರಧ್ವಾಜ್ ಆಶ್ರಮ, ರಾಮಘಾಟ್ ಮತ್ತು ಸತಿ ಅನುಸೂಯ ಮಂದಿರ ಚಿತ್ರಕೂಟ್, ಶ್ರೀಂಗ್ವೆರ್ಪುರ್ ನಲ್ಲಿರುವ ಶೃಂಗಿ ಋಷಿ ಮಂದಿರ, ಕರ್ನಾಟಕದ ಹಂಪಿಯಲ್ಲಿರುವ ಅಂಜನಾದ್ರಿ ಬೆಟ್ಟ, ಆಂಜನೇಯನ ಜನ್ಮ ಸ್ಥಳ, ನಾಸಿಕ್ ನಗರದಲ್ಲಿರುವ ಪಂಚವಟಿ ಮತ್ತು ಕೊನೆಯದಾಗಿ ರಾಮೇಶ್ವರಮ್ ನಲ್ಲಿರುವ ಜ್ಯೋತಿರ್ಲಿಂಗ ಶಿವ ಮಂದಿರ.

ಪ್ರಯಾಣಿಕರಿಗೆ ರೇಲ್ವೇಸ್ ಶುದ್ಧ ಸಸ್ಯಾಹಾರಿ ಊಟ ಮತ್ತು ವಸತಿ ಸೌಕರ್ಯವನ್ನು ಕಲ್ಪಿಸಲಿದೆ. ನಾನ್-ಎಸಿ ಪ್ರಯಾಣಿಕರಿಗೆ ಧರ್ಮಶಾಲೆಗಳಲ್ಲಿ ಸ್ನಾನದ ವ್ಯವಸ್ಥೆ ಮಾಡಲಾಗುತ್ತದೆ. ಎಸಿ-ಕೋಚ್ ಪ್ರಯಾಣಿಕರಿಗೆ ಈ ವ್ಯವಸ್ಥೆಯನ್ನು ಹೋಟೆಲ್ಗಳಲ್ಲಿ ಮಾಡಲಾಗುತ್ತದೆ.

ಯಾನದ ಉದ್ದಕ್ಕೂ ರೇಲ್ವೇಸ್ ಸಿಬ್ಬಂದಿಯು ಪ್ರಯಾಣಿಕರಿಗೆ ಸಹಾಯ ಮಾಡಲಿದೆ.

ಇದನ್ನೂ ಓದಿ: ವನಿತೆಯರ ಕ್ರಿಕೆಟ್ ಪಂದ್ಯಾವಳಿ ನಡುವೆ ಮೈದಾನಕ್ಕೆ ಎಂಟ್ರಿ ಕೊಟ್ಟ ಶ್ವಾನ ಮಾಡಿದ್ದೇನು ಗೊತ್ತಾ! ವಿಡಿಯೋ ನೋಡಿ