ವನಿತೆಯರ ಕ್ರಿಕೆಟ್ ಪಂದ್ಯಾವಳಿ ನಡುವೆ ಮೈದಾನಕ್ಕೆ ಎಂಟ್ರಿ ಕೊಟ್ಟ ಶ್ವಾನ ಮಾಡಿದ್ದೇನು ಗೊತ್ತಾ! ವಿಡಿಯೋ ನೋಡಿ

ಚೆಂಡನ್ನು ಮರಳಿ ಪಡೆಯಲು ಮೈದಾನದಲ್ಲಿ ಫೀಲ್ಡರ್‌ಗಳು ಶ್ವಾನದ ಹಿಂದೆ ಓಡಿದರು. ಅದು ಅವರನ್ನು ತಪ್ಪಿಸಿಕೊಂಡು ಮೈದಾನದೊಳಗೆ ಓಡಾಡುತ್ತಿತ್ತು.

ವನಿತೆಯರ ಕ್ರಿಕೆಟ್ ಪಂದ್ಯಾವಳಿ ನಡುವೆ ಮೈದಾನಕ್ಕೆ ಎಂಟ್ರಿ ಕೊಟ್ಟ ಶ್ವಾನ ಮಾಡಿದ್ದೇನು ಗೊತ್ತಾ! ವಿಡಿಯೋ ನೋಡಿ
ಪ್ರಾತಿನಿಧಿಕ ಚಿತ್ರ
Follow us
| Updated By: ಪೃಥ್ವಿಶಂಕರ

Updated on: Sep 13, 2021 | 7:22 PM

ಇತ್ತೀಚೆಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಸಮಯದಲ್ಲಿ, ಇಂಗ್ಲೆಂಡ್ ವ್ಯಕ್ತಿಯೊಬ್ಬರು ಪಂದ್ಯದ ಮಧ್ಯದಲ್ಲಿ ಮೈದಾನ ಪ್ರವೇಶಿಸುವ ಮೂಲಕ ಸಾಕಷ್ಟು ಚರ್ಚೆಗಳನ್ನು ಸೃಷ್ಟಿಸಿದ್ದರು. ಮೊದಲ ಬಾರಿಗೆ ಇದು ಎಲ್ಲರಿಗೂ ತಮಾಷೆಯಾಗಿ ಕಂಡುಬಂದಿತು. ಆದರೆ ಎರಡನೇ ಮತ್ತು ನಂತರ ಮೂರನೇ ಬಾರಿಗೆ, ಈ ಕೃತ್ಯದಿಂದಾಗಿ ಎಲ್ಲರೂ ಕೋಪಗೊಂಡಿದ್ದರು ಮತ್ತು ಆ ವ್ಯಕ್ತಿಯ ವಿರುದ್ಧವೂ ಕ್ರಮ ಕೈಗೊಳ್ಳಲಾಯಿತು. ಇಂಗ್ಲೆಂಡಿನ ನೆರೆಯ ಐರ್ಲೆಂಡ್​ನಲ್ಲಿ ನಡೆದ ನೇರ ಪಂದ್ಯದ ವೇಳೆ ಇದೇ ರೀತಿಯ ಒಳನುಸುಳುವಿಕೆ ನಡೆದಿರುವುದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಆದಾಗ್ಯೂ, ಈ ಬಾರಿ ಮೈದಾನಕ್ಕೆ ಎಂಟ್ರಿಕೊಟ್ಟವರಿಂದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಬದಲಿಗೆ ಮೈದಾನದಲ್ಲಿದ್ದ ಆಟಗಾರರು ಮತ್ತು ಪ್ರೇಕ್ಷಕರು ಅದನ್ನು ನೋಡಿ ಆನಂದಿಸಿದರು. ವಾಸ್ತವವಾಗಿ ಮೈದಾನದೊಳಕ್ಕೆ ಎಂಟ್ರಿಕೊಟ್ಟವರು ಒಂದು ಮುದ್ದಾದ ಪುಟ್ಟ ಶ್ವಾನ

ಚೊಚ್ಚಲ ಮಹಿಳಾ ಆಲ್-ಐರ್ಲೆಂಡ್ ಟಿ 20 ಕಪ್ ನ ಅಂತಿಮ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಐರ್ಲೆಂಡ್ ಕ್ರಿಕೆಟ್ ಕ್ಲಬ್ ನ ಉತ್ತರ ಸಿವಿಲ್ ಸರ್ವೀಸ್ ಮತ್ತು ಬ್ರೆಡಿ ಕ್ರಿಕೆಟ್ ಕ್ಲಬ್ ನಡುವೆ ಪಂದ್ಯವನ್ನು ಆಡಲಾಗುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಬೈರ್ಡಿ ಕ್ಲಬ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು.

ಮೈದಾನದೊಳಕ್ಕೆ ಎಂಟ್ರಿಕೊಟ್ಟ ಶ್ವಾನ ಈ ಗುರಿಯನ್ನು ಬೆನ್ನಟ್ಟುವಾಗ, ಉತ್ತರ ಸಿವಿಲ್ ಸರ್ವಿಸಸ್ ತಂಡದ ಇನ್ನಿಂಗ್ಸ್ ಸಮಯದಲ್ಲಿ ಒಂದು ತಮಾಷೆಯ ಘಟನೆ ಸಂಭವಿಸಿತು. ಇನಿಂಗ್ಸ್‌ನ 9 ನೇ ಓವರ್‌ನಲ್ಲಿ, ಉತ್ತರ ಸಿವಿಲ್ ಸರ್ವಿಸಸ್ ತಂಡದ ಬ್ಯಾಟ್ಸ್‌ಮನ್ ಚೆಂಡನ್ನು ಚೆಂಡನ್ನು ಆಡಿದರು. ಫೀಲ್ಡರ್ ಚೆಂಡನ್ನು ಹಿಡಿದು ಕೀಪರ್ ಕಡೆಗೆ ಎಸೆದರು, ಅವರು ರನ್ ಔಟ್ ಮಾಡುವ ಪ್ರಯತ್ನದಲ್ಲಿ ಚೆಂಡನ್ನು ಸ್ಟಂಪ್ ಕಡೆಗೆ ಹೊಡೆದರು. ಚೆಂಡು ಸ್ಟಂಪ್‌ಗಳಿಗೆ ಹೊಡೆಯಲಿಲ್ಲ. ಆದರೆ ಈ ಸಮಯದಲ್ಲಿ ಒಂದು ಶ್ವಾನ ಮೈದಾನವನ್ನು ಪ್ರವೇಶಿಸಿತು. ಮೈದಾನದೊಳಕ್ಕೆ ಬಣದ ಶ್ವಾನ ಚೆಂಡನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡಲು ಆರಂಭಿಸಿತು.

ಚೆಂಡನ್ನು ಮರಳಿ ಪಡೆಯಲು ಮೈದಾನದಲ್ಲಿ ಫೀಲ್ಡರ್‌ಗಳು ಶ್ವಾನದ ಹಿಂದೆ ಓಡಿದರು. ಅದು ಅವರನ್ನು ತಪ್ಪಿಸಿಕೊಂಡು ಮೈದಾನದೊಳಗೆ ಓಡಾಡುತ್ತಿತ್ತು. ಸ್ವಲ್ಪ ಪ್ರಯತ್ನದ ನಂತರ, ಬ್ಯಾಟರ್​ ಕಡೆಗೆ ಓಡಿ ಬಂದ ಶ್ವಾನವನ್ನು ನಿಲ್ಲಿಸಿ ಅದರ ಬಾಯಿಯಿಂದ ಚೆಂಡನ್ನು ತೆಗೆದುಕೊಳ್ಳಲಾಯಿತು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಬಾಲಕ ಶ್ವಾನವನ್ನು ಹಿಡಿದುಕೊಂಡು ಮೈದಾನದಿಂದ ಹೊರನಡೆದ.

ಬೈರ್ಡಿ ಕ್ಲಬ್ ಪಂದ್ಯವನ್ನು ಗೆದ್ದಿತು ಪಂದ್ಯದ ಸಮಯದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ರಂಜಿಸಿತು. ಐರ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ತನ್ನ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಎಲ್ಲರಿಗೂ ಇಷ್ಟವಾಗುತ್ತಿದೆ. ಪಂದ್ಯದ ಫಲಿತಾಂಶಕ್ಕೆ ಸಂಬಂಧಿಸಿದಂತೆ, ಬೈರ್ಡಿ ಕ್ರಿಕೆಟ್ ಕ್ಲಬ್ ಈ ಪಂದ್ಯವನ್ನು ಸುಲಭವಾಗಿ ಗೆದ್ದಿತು. ಸಿವಿಲ್ ಸರ್ವೀಸಸ್ ತಂಡವು 12 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಲು ಸಾಧ್ಯವಾಯಿತು ಮತ್ತು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ಬೈರ್ಡಿ ಕ್ಲಬ್ ಪಂದ್ಯವನ್ನು 11 ರನ್ಗಳಿಂದ ಗೆದ್ದು ಫೈನಲ್​ಗೆ ತಲುಪಿತು.

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ