ICC Players of the Month: ಬುಮ್ರಾ ಕೈತಪ್ಪಿದ ಅವಕಾಶ; ಆಗಸ್ಟ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಜೋ ರೂಟ್ ಭಾಜನ

ICC Players of the Month: ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಆಗಸ್ಟ್ ತಿಂಗಳ ಐಸಿಸಿ ಆಟಗಾರನ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಭಾರತದ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಅವರ ಅದ್ಭುತ ಬ್ಯಾಟಿಂಗ್​ನಿಂದಾಗಿ ಅವರು ಈ ಯಶಸ್ಸನ್ನು ಸಾಧಿಸಿದರು.

ICC Players of the Month: ಬುಮ್ರಾ ಕೈತಪ್ಪಿದ ಅವಕಾಶ; ಆಗಸ್ಟ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಜೋ ರೂಟ್ ಭಾಜನ
ಜೋ ರೂಟ್
Follow us
TV9 Web
| Updated By: ಪೃಥ್ವಿಶಂಕರ

Updated on:Sep 13, 2021 | 5:30 PM

ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಆಗಸ್ಟ್ ತಿಂಗಳ ಐಸಿಸಿ ಆಟಗಾರನ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಭಾರತದ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಅವರ ಅದ್ಭುತ ಬ್ಯಾಟಿಂಗ್​ನಿಂದಾಗಿ ಅವರು ಈ ಯಶಸ್ಸನ್ನು ಸಾಧಿಸಿದರು. ಈ ಪ್ರಶಸ್ತಿಗಾಗಿ ಜೋ ರೂಟ್ ಭಾರತೀಯ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಅವರ ನಡುವೆ ಫೈಪೋಟಿ ಏರ್ಪಟ್ಟಿತ್ತು. ಮಹಿಳಾ ವಿಭಾಗದಲ್ಲಿ, ಐರ್ಲೆಂಡ್​ನ ಆಲ್ ರೌಂಡರ್ ಎಮಿಯರ್ ರಿಚರ್ಡ್ಸನ್ ಈ ತಿಂಗಳ ಅತ್ಯುತ್ತಮ ಆಟಗಾರ್ತಿಯಾಗಿ ಆಯ್ಕೆಯಾದರು. ಎಮಿಯರ್ ತನ್ನ ಸಹ ಆಟಗಾರ ಗ್ಯಾಬಿ ಲೂಯಿಸ್ ಮತ್ತು ಥೈಲ್ಯಾಂಡ್‌ನ ನಟಾಯ ಬೌಚೆಥಮ್ ಅವರನ್ನು ಹಿಂದಿಕ್ಕಿದರು.

ಭಾರತದ ವಿರುದ್ಧ ಆಗಸ್ಟ್‌ನಲ್ಲಿ ನಡೆದ ಮೂರು ಟೆಸ್ಟ್‌ಗಳಲ್ಲಿ ರೂಟ್ 507 ರನ್ ಗಳಿಸಿದರು, ಇದರಲ್ಲಿ ಮೂರು ಶತಕಗಳು ಸೇರಿವೆ. ಈ ಪ್ರದರ್ಶನದಿಂದಾಗಿ, ಅವರು ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ತಲುಪಿದರು. ಐದು ಪಂದ್ಯಗಳ ಟೆಸ್ಟ್ ಸರಣಿಯು ಮಧ್ಯದಲ್ಲಿ ಕೊನೆಗೊಂಡಿತು. ಕೊರೊನಾ ಪ್ರಕರಣಗಳಿಂದ ಐದನೇ ಮತ್ತು ಅಂತಿಮ ಟೆಸ್ಟ್ ಅನ್ನು ರದ್ದುಗೊಳಿಸಬೇಕಾಗಿ ಬಂತು. ಐಸಿಸಿಯ ವೋಟಿಂಗ್ ಅಕಾಡೆಮಿಯ ಸದಸ್ಯರಾಗಿರುವ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜೆಪಿ ಡುಮಿನಿ ಹೇಳಿಕೆಯಲ್ಲಿ, ಕ್ಯಾಪ್ಟನ್ ಆಗಿ ನಿರೀಕ್ಷೆಗಳು ಮತ್ತು ಜವಾಬ್ದಾರಿಯ ನಡುವೆ, ಅವರು ಬ್ಯಾಟ್ ಮೂಲಕ ಅದ್ಭುತ ಪ್ರದರ್ಶನ ನೀಡಿದರು ಎಂದಿದ್ದಾರೆ.

ಎಮಿಯರ್ ಅವರ ಅದ್ಭುತ ಪ್ರದರ್ಶನ ಕಳೆದ ತಿಂಗಳು ನಡೆದ ಮಹಿಳಾ ಟಿ 20 ವಿಶ್ವಕಪ್ ಯುರೋಪ್ ಕ್ವಾಲಿಫೈಯರ್​ನಲ್ಲಿ ಎಮಿಯರ್ ಅದ್ಭುತವಾಗಿ ಪ್ರದರ್ಶನ ನೀಡಿದ್ದರಿಂದ ಪಂದ್ಯಾವಳಿಯ ಆಟಗಾರ್ತಿಯಾಗಿ ಆಯ್ಕೆಯಾದರು. ಪಂದ್ಯಾವಳಿಯಲ್ಲಿ ಅವರು 4.19 ಎಕಾನಮಿ ದರದಲ್ಲಿ ರನ್ ನೀಡಿ ಏಳು ವಿಕೆಟ್ ಪಡೆದರು. ಅವರು ಜರ್ಮನಿ ವಿರುದ್ಧದ ಮೊದಲ ಪಂದ್ಯದಲ್ಲಿ ಆರು ರನ್​ಗೆ ಎರಡು ವಿಕೆಟ್ ಮತ್ತು ಗ್ರೂಪ್ ಟಾಪರ್ ಸ್ಕಾಟ್ಲೆಂಡ್ ವಿರುದ್ಧ 24 ಕ್ಕೆ ಎರಡು ವಿಕೆಟ್ ಪಡೆದರು. ಅವರು ಫ್ರಾನ್ಸ್ ವಿರುದ್ಧ ಎರಡು ರನ್ ಮತ್ತು ನೆದರ್ಲೆಂಡ್ಸ್ ವಿರುದ್ಧ 22 ಕ್ಕೆ ಒಂದು ವಿಕೆಟ್ ಪಡೆದರು. ಐರ್ಲೆಂಡ್ ತಂಡವು ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿತು.

ಪಂದ್ಯಾವಳಿಯಲ್ಲಿ ಎಮಿಯರ್ ಒಟ್ಟು 76 ರನ್ ಗಳಿಸಿದರು. ಇದರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ 49 ಎಸೆತಗಳಲ್ಲಿ 53 ರನ್ ಗಳಿಸಿದರು. ಆಗಸ್ಟ್ ತಿಂಗಳ ಐಸಿಸಿ ಮಹಿಳಾ ಆಟಗಾರ್ತಿಯಾಗಿ ಆಯ್ಕೆಯಾಗಿರುವುದು ಅತ್ಯಾಕರ್ಷಕವಾಗಿದೆ ಮತ್ತು ಈಗ ವಿಜೇತರಾಗಿ ಆಯ್ಕೆಯಾಗಿರುವುದು ಅದ್ಭುತವಾಗಿದೆ ಎಂದು ಎಮಿಯರ್ ಹೇಳಿದರು. ಜಿಂಬಾಬ್ವೆಯ ಪೊಮಿ ಎಂಬಂಗ್ವಾ ಕೂಡ ಐಸಿಸಿ ವೋಟಿಂಗ್ ಅಕಾಡೆಮಿಯಲ್ಲಿ ಎಮಿಯರ್ ಪ್ರದರ್ಶನವನ್ನು ಶ್ಲಾಘಿಸಿದರು.

Published On - 5:21 pm, Mon, 13 September 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!