‘ಇದು ಲವ್ ಮ್ಯಾರೇಜ್​, ಲವ್ ಜಿಹಾದ್ ಅಲ್ಲ’; ನಟಿ ಶ್ರುತಿ ಹೀಗೆ ಹೇಳಿದ್ದೇಕೆ?

| Updated By: ರಾಜೇಶ್ ದುಗ್ಗುಮನೆ

Updated on: Apr 09, 2022 | 9:43 PM

ರಾಘವೇಂದ್ರ ರಾಜ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ‘13’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಮುಸ್ಲಿಂ ಮಹಿಳೆಯಾಗಿ ಶ್ರುತಿ ಬಣ್ಣ ಹಚ್ಚುತ್ತಿದ್ದಾರೆ.

ಪುನೀತ್ ರಾಜ್​ಕುಮಾರ್ (Puneeth Rajkumar)​ ನಿಧನ ವಿಚಾರ ಅನೇಕರಿಗೆ ದುಃಖ ತಂದಿದೆ. ಅದರಲ್ಲೂ, ಅವರ ಕುಟುಂಬದವರಿಗೆ ಈ ದುಃಖದಿಂದ ಹೊರಬರಲು ಇನ್ನೂ ಸಾಧ್ಯವಾಗುತ್ತಿಲ್ಲ. ಪುನೀತ್ ಸಹೋದರ ರಾಘವೇಂದ್ರ ರಾಜ್​ಕುಮಾರ್ ಅವರು ವೇದಿಕೆಗಳಲ್ಲಿ ಪುನೀತ್ ಅವರನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಾರೆ. ಆದರೆ, ಜೀವನ ಸಾಗಲೇಬೇಕು. ಅವರು ಈಗ ಮತ್ತೆ ಬಣ್ಣದ ಲೋಕದಲ್ಲಿ ಬ್ಯುಸಿ ಆಗುತ್ತಿದ್ದಾರೆ. ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ‘13’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಮುಸ್ಲಿಂ ಮಹಿಳೆಯಾಗಿ ಶ್ರುತಿ (Shruthi) ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುವಾಗ ‘ಇದು ಲವ್ ಮ್ಯಾರೇಜ್​, ಲವ್ ಜಿಹಾದ್ ಅಲ್ಲ’ ಎಂದು ನಕ್ಕಿದ್ದಾರೆ ಶ್ರುತಿ. ಅವರು ಸಿನಿಮಾ ಬಗ್ಗೆ ಹಂಚಿಕೊಂಡ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಯಶ್​, ಪ್ರಶಾಂತ್​ ಅವರನ್ನು ಸಂದರ್ಶನ ಮಾಡಿದ ಬಾಲಿವುಡ್​ ಸ್ಟಾರ್​ ನಟ; ಇಲ್ಲಿದೆ ವಿಡಿಯೋ

ರಾಘವೇಂದ್ರ ರಾಜ್​ಕುಮಾರ್​-ಶ್ರುತಿ ಹೊಸ ಚಿತ್ರ ‘13’; ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದ ಮುಹೂರ್ತ