ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಸಹ ನವೀನ್ ಎಸ್ ಜಿಗೆ ಶ್ರದ್ಧಾಂಜಲಿ ಅರ್ಪಿಸಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 21, 2022 | 8:57 PM

ಪೆಟ್ಟಿಗೆಯಲ್ಲಿರುವ ನವೀನ್ ದೇಹವನ್ನೊಮ್ಮೆ ಗಮನಿಸಿ. ಅವರಿಗೆ ಎಲ್ಲಿ ಗಾಯವಾಗಿತ್ತು, ದೇಹದ ಯಾವ ಭಾಗ ಶೆಲ್ಲಿಂಗ್ ನಲ್ಲಿ ಛಿದ್ರಗೊಂಡಿತು ಅನ್ನೋದು ಗೊತ್ತಾಗುವುದಿಲ್ಲ. ನವೀನ್ ನಿದ್ರೆ ಮಾಡುತ್ತಿರುವರೇನೋ ಎಂಬಂತೆ ಭಾಸವಾಗುತ್ತದೆ.

ಉಕ್ರೇನಲ್ಲಿ ಮಡಿದ ನವೀನ್ ಶೇಖರಪ್ಪ ಗ್ಯಾನಗೌಡರ್ (Naveen Shekharappa Gyanagoudar) ಪಾರ್ಥೀವ ಶರೀರ ಅವರ ಸ್ವಗ್ರಾಮ ಚಳಗೇರಿಗೆ ಆಗಮಿಸಿದ ಬಳಿಕ ಅನೇಕ ಗಣ್ಯರು, ಮಠಾಧಿಶರು (pntiffs), ಬೇರೆ ಬೇರೆ ಊರುಗಳ ನಾಗರಿಕರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಮರ್ಪಿಸಿದರು. ಹರಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ (Sri Vachananda Swamiji) ಅವರಲ್ಲೊಬ್ಬರು. ತಮ್ಮ ಕೆಲವು ಶಿಷ್ಯರೊಂದಿಗೆ ನವೀನ್ ಮನೆಗೆ ಆಗಮಿಸುವ ಶ್ರೀಗಳು ನವೀನ್ ದೇಹವಿರುವ ಶವ ಪೆಟ್ಟಿಗೆಗೆ ಒಂದು ಸುತ್ತು ಹಾಕಿ ಹೂಗಳಿಂದ ಶ್ರದ್ಧಾಂಜಲಿ ಸಮರ್ಪಿಸುತ್ತಾರೆ. ನಂತರ ನವೀನ್ ದೇಹಕ್ಕೆ ವಂದಿಸಿ ಅವರ ತಂದೆ ಶೇಖರಪ್ಪ ಮತ್ತು ಸಹೋದರ ಹರ್ಷ ಅವರಲ್ಲಿಗೆ ಹೋಗಿ ಮಾತಾಡುತ್ತಾರೆ.

ಶೇಖರಪ್ಪ ಮತ್ತು ಹರ್ಷ ಅವರೊಂದಿಗೆ ಮಾತಾಡುವಾಗ ಅವರ ಹಾವಭಾವ ನೋಡುತ್ತಿದ್ದರೆ ನವೀನ್ ಗೆ ಎಲ್ಲಿ ಪೆಟ್ಟಾಗಿದೆ ಅಂತ ಕೇಳುತ್ತಿರುವಂತಿದೆ. ಪೆಟ್ಟಿಗೆಯಲ್ಲಿರುವ ನವೀನ್ ದೇಹವನ್ನೊಮ್ಮೆ ಗಮನಿಸಿ. ಅವರಿಗೆ ಎಲ್ಲಿ ಗಾಯವಾಗಿತ್ತು, ದೇಹದ ಯಾವ ಭಾಗ ಶೆಲ್ಲಿಂಗ್ ನಲ್ಲಿ ಛಿದ್ರಗೊಂಡಿತು ಅನ್ನೋದು ಗೊತ್ತಾಗುವುದಿಲ್ಲ. ನವೀನ್ ನಿದ್ರೆ ಮಾಡುತ್ತಿರುವರೇನೋ ಎಂಬಂತೆ ಭಾಸವಾಗುತ್ತದೆ.

ಶೇಖರಪ್ಪ ಮತ್ತು ಹರ್ಷ ಅವರು ತಲೆಭಾಗಗಳನ್ನು ಮುಟ್ಟಿ ತೋರಿಸುತ್ತಿದ್ದಾರೆ. ಅಂದರೆ ನವೀನ್ ಗೆ ಪೆಟ್ಟಾಗಿದ್ದು ತಲೆಗೆ. ಸ್ವಾಮೀಜಿ ಸಹ ತಲೆ ಮುಟ್ಟಿಕೊಂಡು ಏನನ್ನೋ ಕೇಳುತ್ತಿದ್ದಾರೆ. ಅದೇ ಸಮಯಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಅಲ್ಲಿಗೆ ಬಂದು ಶೇಖರಪ್ಪನವರಿಗೆ ಏನನ್ನೋ ಹೇಳುತ್ತಾರೆ. ಸ್ವಾಮೀಜಿಗಳು ಸಹ ಅಧಿಕಾರಿಯೊಂದಿಗೆ ಮಾತಾಡುತ್ತಾರೆ.

ಇದನ್ನೂ ಓದಿ:  Naveen Janagoudar: ದಾವಣಗೆರೆ ನಗರದ ಎಸ್ಎಸ್​ ಮೆಡಿಕಲ್ ಕಾಲೇಜಿನ ಅಂಗರಚನಾ ಶಾಸ್ತ್ರ ವಿಭಾಗದಲ್ಲಿ ನವೀನ್ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ