ಬಡವರ ಕಷ್ಟ ನೋಡಲಾಗದೆ ನಾವು ಅನ್ನಭಾಗ್ಯ ಯೋಜನೆಯನ್ನು ಆರಂಭಿಸಿದ್ದು ಎಂದರು ಸಿದ್ದರಾಮಯ್ಯ

ಬಡವರ ಕಷ್ಟ ನೋಡಲಾಗದೆ ನಾವು ಅನ್ನಭಾಗ್ಯ ಯೋಜನೆಯನ್ನು ಆರಂಭಿಸಿದ್ದು ಎಂದರು ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Mar 21, 2022 | 11:43 PM

ಅವರು ಒಂದು ಮುಷ್ಟಿ ಅನ್ನಕ್ಕಾಗಿ ಉಳ್ಳವರ ಮನೆ ಮುಂದೆ ಹೋಗಿ ನಿಲ್ಲುತ್ತಿದ್ದರು. ಒಂದು ಪಾತ್ರೆಯಲ್ಲಿ ಅನ್ನು ಕೇಳಿ ಪಡೆದು ಮನೆಗೆ ಹೋಗಿ ಜ್ವರದಿಂದ ಬಳಲುವ ಮಗುವಿಗೆ ತಿನ್ನಿಸುತ್ತಿದ್ದರು. ತಾವು ಚಿಕ್ಕವರಾಗಿದ್ದಾಗ ಇದನ್ನೆಲ್ಲ ಕಣ್ಣಾರೆ ಕಂಡಿರುವುದಾಗಿ ಸಿದ್ದರಾಮಯ್ಯ ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) 2013 ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಯಾಕೆ ಅನ್ನಭಾಗ್ಯ ಯೋಜನೆ (Anna Bhagya Scheme) ಜಾರಿಗೆ ತಂದ ಹಿಂದಿನ ಕಾರಣವನ್ನು ಸದನದಲ್ಲಿ ಸೋಮವಾರ ವಿವರಿಸಿದರು. ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (Arvind Bellad) ಅವರು ಅನ್ನಭಾಗ್ಯ ಸ್ಕೀಮ್ ಬಗ್ಗೆ ಪ್ರಸ್ತಾಪ ಮಾಡಿದಾಗ ಸಿದ್ದರಾಮಯ್ಯ ಎದ್ದು ನಿಂತು ಮಾತಾಡಿದರು. ಹಳೆ ಮೈಸೂರು ಭಾಗದಲ್ಲಿ ಬಡವರ ಮನೆಗಳಲ್ಲಿ ಕೇವಲ ಹಬ್ಬ ಹರಿದಿನ ಮತ್ತು ಮನೆಗೆ ನೆಂಟರು ಬಂದಾಗ ಮಾತ್ರ ಅನ್ನ ಬೇಯಿಸುತ್ತಿದ್ದರು. ಬೇರೆ ಸಮಯದಲ್ಲೆಲ್ಲ ರಾಗಿಮುದ್ದೆ ಮತ್ತು ಜೋಳದ ಮುದ್ದೆ ಮಾಡಿಕೊಂಡು ಊಟ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು. ಬಡವರಿಗೆ ಅಕ್ಕಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಮನೆಯಲ್ಲಿ ಚಿಕ್ಕ ಮಕ್ಕಳೇನಾದರೂ ಕಾಯಿಲೆ ಬಿದ್ದರೆ ಅವರ ಪಾಡು ಹೇಳತೀರದು. ಅನಾರೋಗ್ಯದಿಂದ ಬಳಲುವ ಮಕ್ಕಳಿಗೆ ಮುದ್ದೆ ತಿನ್ನಿಸಲಾಗದು ಅವರಿಗೆ ಮೆತ್ತಗೆ ಬೇಯಿಸಿದ ಅನ್ನವೇ ಕೊಡಬೇಕು. ಅದರೆ ಮನೇಲಿ ಅಕ್ಕಿಯೇ ಇರುತ್ತಿರಲಿಲ್ಲ ಎಂದು ಸಿದ್ದರಾರಮಯ್ಯ ಮನೋಜ್ಞವಾಗಿ ಹೇಳಿದರು.

ಆಗ ಅವರು ಒಂದು ಮುಷ್ಟಿ ಅನ್ನಕ್ಕಾಗಿ ಉಳ್ಳವರ ಮನೆ ಮುಂದೆ ಹೋಗಿ ನಿಲ್ಲುತ್ತಿದ್ದರು. ಒಂದು ಪಾತ್ರೆಯಲ್ಲಿ ಅನ್ನು ಕೇಳಿ ಪಡೆದು ಮನೆಗೆ ಹೋಗಿ ಜ್ವರದಿಂದ ಬಳಲುವ ಮಗುವಿಗೆ ತಿನ್ನಿಸುತ್ತಿದ್ದರು. ತಾವು ಚಿಕ್ಕವರಾಗಿದ್ದಾಗ ಇದನ್ನೆಲ್ಲ ಕಣ್ಣಾರೆ ಕಂಡಿರುವುದಾಗಿ ಸಿದ್ದರಾಮಯ್ಯ ಹೇಳಿದರು.

ಅವರ ಪಾಡು ನೆನೆಸಿಕೊಂಡೇ ಅನ್ನಭಾಗ್ಯ ಸ್ಕೀಮ್ ಜಾರಿಗೆ ತಂದಿದ್ದು. ಕೇಂದ್ರ ಸರ್ಕಾರದಿಂದ ತಮಗೆ ನೆರವು ಸಿಗುತಿತ್ತೆಂದು ಸಿದ್ದರಾಮಯ್ಯ ಹೇಳಿದರು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಬಡವರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸುವ ಯೋಜನೆ ಆರಂಭಿಸಿದರು. ಕೇಂದ್ರದಿಂದ 3 ರೂ. ಗೆ ಕೇಜಿಯಂತೆ ಖರೀದಿಸಿ ಕರ್ನಾಟಕದಲ್ಲಿ ಕೇಜಿಗೆ ರೂ. 1 ರಂತೆ ಬಡವರಿಗೆ ವಿತರಿಸಲಾಗುತಿತ್ತು ಅಂತ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:  Siddaramaiah: ರಾಗಿ ಖರೀದಿ ಮೇಲೆ ಹೇರಿರುವ ಮಿತಿ ತೆರವುಗೊಳಿಸುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿ ಪತ್ರ ಬರೆದ ಸಿದ್ದರಾಮಯ್ಯ

Published on: Mar 21, 2022 11:09 PM