Karnataka Assembly Polls: ಅಣ್ಣನ ಮಗ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿಗಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ವಾಪಸ್ಸಾದ ನಾರಾ ಪ್ರತಾಪ್ ರೆಡ್ಡಿ!
ಕಾಂಗ್ರೆಸ್ ಪಕ್ಷ ಭರತ್ ಗೆ ಟಿಕೆಟ್ ನೀಡಿ ಬಹಳ ಉತ್ತಮ ಕೆಲಸ ಮಾಡಿದೆ, ಅವರನ್ನು ಬೆಳೆಸಿ ದೊಡ್ಡವನಾಗಿ ಮಾಡಿರುವ ತಾವು ಗೆಲುವಿಗಾಗಿಯೂ ಶ್ರಮಿಸುವುದಾಗಿ ಪ್ರತಾಪ್ ರೆಡ್ಡಿ ಹೇಳಿದರು.
ಬಳ್ಳಾರಿ: ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ (Nara Suryanarayana Reddy) ಮತ್ತು ಅವರ ಕಿರಿಯ ಸಹೋದರ ನಾರಾ ಪ್ರತಾಪ್ ರೆಡ್ಡಿ (Nara Pratap Reddy) ನಡುವೆ ಒಂದೂವರೆ ದಶಕಗಳ ವೈಷಮ್ಯ ಕೊನೆಗೊಂಡಿದೆ. ಸೂರ್ಯನಾರಾಯಣ ಪುತ್ರ ನಾರಾ ಭರತ್ ರೆಡ್ಡಿ (Nara Pratap Reddy) ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಜೆಡಿಎಸ್ ಪಕ್ಷದಲ್ಲಿದ್ದ ಪ್ರತಾಪ್ ರೆಡ್ಡಿ ಅಣ್ಣನ ಮಗನನ್ನು ಗೆಲ್ಲಿಸಲು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಬಳ್ಳಾರಿಗೆ ಯುವ ನಾಯಕರ ಅವಶ್ಯಕತೆಯಿತ್ತು, ಕಾಂಗ್ರೆಸ್ ಪಕ್ಷ ಭರತ್ ಗೆ ಟಿಕೆಟ್ ನೀಡಿ ಬಹಳ ಉತ್ತಮ ಕೆಲಸ ಮಾಡಿದೆ, ಅವರನ್ನು ಬೆಳೆಸಿ ದೊಡ್ಡವನಾಗಿ ಮಾಡಿರುವ ತಾವು ಗೆಲುವಿಗಾಗಿಯೂ ಶ್ರಮಿಸುವುದಾಗಿ ಪ್ರತಾಪ್ ರೆಡ್ಡಿ ಹೇಳಿದರು.ಚಿಕ್ಕಪ್ಪ ತನ್ನ ಬೆಂಬಲಕ್ಕೆ ಬಂದಿದ್ದು ನೂರಾನೆ ಬಲ ನೀಡಿದೆ ಎಂದು ಭರತ್ ಹೇಳಿದರು. ಟಿವಿ9 ಬಳ್ಳಾರಿ ಪ್ರತಿನಿಧಿ ವೀರೇಶ್ ದಾನಿ ರೆಡ್ಡಿಗಳೊಂದಿಗೆ ನಡೆಸಿದ ಮಾತುಕತೆಯನ್ನು ಕೇಳಿಸಿಕೊಳ್ಳಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ